ಮಹಿಳೆಯ ಭೀಕರ ಕೊಲೆ ಪ್ರಕರಣ – ಕೊನೆಗೂ ಅವಳ ಜೊತೆ ಮಾತಾಡೋಕೆ ಆಗ್ಲಿಲ್ಲ ಕಣ್ಣೀರಿಟ್ಟ ಸಹೋದರಿ

ಬೆಂಗಳೂರು: ಒಂದು ವರ್ಷ ಆಯ್ತು ಅವಳನ್ನ ನೋಡಿ, ಕೊನೆಗೂ ಅವಳ ಬಳಿ ಮಾತಾಡೋಕು ಆಗಿಲ್ಲ. ನಿನ್ನೆ ಈ ರೀತಿ ಪೀಸ್‌ ಪೀಸ್‌ ಆದ ರೀತಿಯಲ್ಲಿ ನೋಡಿದೆ ಎಂದು ಕೊಲೆಯಾದ ಮಹಾಲಕ್ಷ್ಮಿಯ ಅಕ್ಕ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

ತುಂಬಾ ಕ್ರೂರವಾಗಿ ಆಕೆಯನ್ನು ಸಾಯಿಸಿದ್ದಾರೆ. ಕೊಲೆಗೈದ ಪಾಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ಕಣ್ಣೀರಿಟ್ಟಿದ್ದಾರೆ.

ಮಹಿಳೆಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿ 20ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು (Fridge) ಆರೋಪಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ (Bengaluru) ವೈಯಾಲಿಕಾವಲ್‌ನ (Vyalikaval) ವಿನಾಯಕನಗರದಲ್ಲಿ (Vinayaka Nagar) ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ರಫ್‌ ಸೇರಿದಂತೆ ನಾಲ್ವರ ಮೇಲೆ ಕೊಲೆಯಾದ ಮಹಿಳೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಶ್ರಫ್‌, ಮುಕ್ತ, ಶಶಿಧರ್, ಸುನೀಲ್ ನಾಲ್ವರ ಹೆಸರನ್ನು ಕೊಲೆಯಾದ ಮಹಿಳೆ ಕುಟುಂಬಸ್ಥರು ಹೇಳಿದ್ದಾರೆ. ಮುಕ್ತ, ಶಶಿಧರ್‌, ಸುನೀಲ್ ಮೂವರು ಮೃತ ಮಹಾಲಕ್ಷ್ಮಿ ಸಹೋದ್ಯೋಗಿಗಳು.‌ ಕೆಲಸ ಮಾಡುವ ಕಡೆಯಲ್ಲಿ ಮಹಾಲಕ್ಷ್ಮಿ ಜಗಳ ಮಾಡಿಕೊಂಡಿದ್ದಳು.

ಮಹಾಲಕ್ಷ್ಮಿ ಜೊತೆ ಅಶ್ರಫ್‌ ಸಲುಗೆಯಿಂದ ಇದ್ದ. ಈತ ಉತ್ತರಾಖಂಡ ಮೂಲದವ. ಸಲೂನ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಈಗ ಮಹಾಲಕ್ಷ್ಮಿ ಕುಟುಂಬಸ್ಥರು ನಾಲ್ವರ ಮೇಲೆ ಅನುಮಾನ ಇದೆ ಎಂದಿದ್ದಾರೆ.