ನಿನ್ನೆ ಸಂಗೀತ ಬ್ರಹ್ಮ ಹಂಸಲೇಖ ಅವರ 71ನೇ ಜನ್ಮದಿನ. ಈ ಹುಟ್ಟು ಹಬ್ಬವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಅವರು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ನಿನ್ನೆ ಅವರು ಎಚ್.ಡಿ. ಕೋಟೆ ತಾಲೂಕಿನ ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮಲಾಪುರ ಹಾಡಿಯಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಆದಿವಾಸಿ 10 ಮಕ್ಕಳಿಗೆ ಉಚಿತವಾಗಿ ಸಂಗೀತ ಅಭ್ಯಾಸ ಕೊಡಿಸುವುದಾಗಿ ಸಂಕಲ್ಪ ಮಾಡಿದ್ದಾರೆ.

ಹಾಡಿಯಲ್ಲೇ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡು, ಅವರೊಂದಿಗೆ ಹಾಡಿ ನಲಿದಿರುವ ಹಂಸಲೇಖ ಅವರು, ಹತ್ತು ಮಕ್ಕಳಿಗೆ ತಮ್ಮ ಸಂಗೀತ ಶಾಲೆಯಲ್ಲಿ ಉಚಿತವಾಗಿ ಸಂಗೀತ ಶಿಕ್ಷಣ ಕೊಡಿಸುವುದಾಗಿ ಹೇಳಿದರು. ಕಾಡಿನ ಮಧ್ಯೆ ಹುಟ್ಟು ಹಬ್ಬ ಆಚರಿಸಲೆಂದೇ ಅವರು ಪತ್ನಿಯೊಂದಿಗೆ ಬೊಮ್ಮಲಾಪುರ ಹಾಡಿಗೆ ಬಂದಿದ್ದರು. ಆದಿವಾಸಿ ಕುಟುಂಬಗಳು ತಯಾರಿಸಿದ್ದ ಅಡುಗೆಯನ್ನು ಸವಿದ ಹಂಸಲೇಖ, ಮುಂದಿನ ದಿನಗಳಲ್ಲಿ ಮತ್ತಷ್ಟು ಕುಟುಂಬಗಳಿಗೆ ಸಹಾಯ ಮಾಡುವುದಾಗಿ ಪ್ರಕಟಿಸಿದರು. ಇದನ್ನೂ ಓದಿ: ಡಿಸೆಂಬರ್ ನಲ್ಲಿ ಮದುವೆ ಆಗಲಿದ್ದಾರೆ ತಿಥಿ ಸಿನಿಮಾ ಖ್ಯಾತಿಯ ಪೂಜಾ

ಹಂಸಲೇಖ ಅವರು ಬೆಂಗಳೂರಿನಲ್ಲಿ ದೇಸಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಸಂಸ್ಥೆಯ ಮೂಲಕವೇ ಆದಿವಾಸಿ ಮಕ್ಕಳಿಗೆ ಉಚಿತವಾಗಿ ಸಂಗೀತ ಶಿಕ್ಷಣದ ಜೊತೆಗೆ ಕಲಿಯಲು ಬೇಕಾಗುವ ಸಂಗೀತ ಉಪಕರಣಗಳನ್ನು ಮತ್ತು ಟ್ಯಾಬ್ಲೆಟ್ ಕೂಡ ಕೊಡುತ್ತಾರಂತೆ. ಬೇರೆ ಮಕ್ಕಳಿಗೆ ಸಂಗೀತ ಕಲಿಯುವ ಆಸಕ್ತಿ ಇದ್ದರೆ, ಆನ್ ಲೈನ್ ಮೂಲಕವೂ ಉಚಿತವಾಗಿ ಕಲಿಯಲು ಏರ್ಪಾಟು ಮಾಡಿದ್ದಾರಂತೆ.

Leave a Reply