2 ನಿಮಿಷದಲ್ಲಿ ಮಾಡುವ ಮ್ಯಾಗಿ ಇನ್ಮುಂದೆ ಸಖತ್ ದುಬಾರಿ!

ನವದೆಹಲಿ: ಈಗಾಗಲೇ ದಿನ ನಿತ್ಯ ಬಳಕೆಯಾಗುವ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಈಗ ಮ್ಯಾಗಿ ಸರದಿಯಾಗಿದೆ. ಮ್ಯಾಗಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಫಟಾಫಟ್ ಅಂತಾ ಮಾಡುವ ಈ ಮ್ಯಾಗಿಯ (Maggi) ಬೆಲೆ ಹೆಚ್ಚಳವಾಗಲಿದೆ ಎನ್ನುವ ಸುದ್ದಿಯೊಂದು ಹೊರ ಬಿದ್ದಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮ್ಯಾಗಿ ಬೆಲೆ ಕೂಡ ಹೆಚ್ಚಳವಾಗಿದೆ. ನೆಸ್ಲೆ (Nestle) ಇಂಡಿಯಾ ಮ್ಯಾಗಿ ಬೆಲೆಯನ್ನು ಶೇ.9ರಿಂದ 16ರಷ್ಟು ಹೆಚ್ಚಿಸಿದೆ. ನೆಸ್ಲೆ ಕಂಪನಿಯು ಹಾಲು ಮತ್ತು ಕಾಫಿ ಪುಡಿಯ ಬೆಲೆಗಳನ್ನು ಕೂಡ ಹೆಚ್ಚಿಸಿದೆ. ಇಷ್ಟು ದಿನ 70 ಗ್ರಾಂ ಮ್ಯಾಗಿ ಪ್ಯಾಕೆಟ್‍ಗೆ 12 ರೂ. ಇದ್ದುದು ಇನ್ನು ಮುಂದೆ 14 ರೂ. ಆಗಲಿದೆ. 140 ಗ್ರಾಂ ಮ್ಯಾಗಿ ಮಸಾಲಾ ನೂಡಲ್ಸ್ ಬೆಲೆ 3 ರೂ. ಹೆಚ್ಚಳವಾಗಲಿದೆ. 560 ಗ್ರಾಂ ಮ್ಯಾಗಿ ಪ್ಯಾಕ್‍ಗೆ 96 ರೂ. ಇದ್ದುದು 105 ರೂ. ಆಗಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಇದನ್ನೂ ಓದಿ: ಮಗು ಹುಟ್ಟಿದ ಸಂಭ್ರಮದ ಮಧ್ಯೆ ಬೇರ್ಪಟ್ಟ ಎಲೋನ್ ಮಸ್ಕ್ ಜೋಡಿ

ಹೆಚ್‍ಯುಎಲ್ ಬ್ರೂ ಕಾಫಿಯ ಬೆಲೆಯನ್ನು ಶೇ. 3ರಿಂದ 7ರಷ್ಟು ಮತ್ತು ಬ್ರೂ ಗೋಲ್ಡ್ ಕಾಫಿ ಜಾರ್‍ನ ಬೆಲೆಯನ್ನು ಶೇ. 3ರಿಂದ 4ರಷ್ಟು ಹೆಚ್ಚಿಸಿದೆ. ನೆಸ್‍ಕೆಫೆ ಕ್ಲಾಸಿಕ್ ಕಾಫಿ ಪುಡಿಯ ಬೆಲೆ ಶೇ. 3.7ರಷ್ಟು ಏರಿಕೆಯಾಗಿದೆ. ಬ್ರೂ ಸಣ್ಣ ಕಾಫಿ ಪ್ಯಾಕೆಟ್‍ಗಳ ಬೆಲೆಯೂ ಶೇ.3ರಿಂದ ಶೇ.6.66ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ತಾಜ್ ಮಹಲ್ ಚಹಾದ ಬೆಲೆ ಶೇ.3.7ರಿಂದ ಶೇ.5.8ಕ್ಕೆ ಏರಿಕೆಯಾಗಿದೆ. ಬ್ರೂಕ್ ಬಾಂಡ್‍ನ ಚಹಾ ಪುಡಿಯ ಬೆಲೆಗಳು ಶೇ. 1.5ರಿಂದ 14ಕ್ಕೆ ಏರಿಕೆಯಾಗಿವೆ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಕಂಪನಿಗಳು ಕಾಫಿ, ಟೀ ಪುಡಿಯ ಬೆಲೆಯನ್ನು ಹೆಚ್ಚಿಸಿವೆ. ಇದನ್ನೂ ಓದಿ: ಕೊತ್ತಂಬರಿಯನ್ನು ಭಾರತದ ರಾಷ್ಟ್ರೀಯ ಮೂಲಿಕೆ ಮಾಡಿ- ನೆಟ್ಟಿಗರ ಆಗ್ರಹ

ಮ್ಯಾಗಿ, ಕಾಫಿ, ಟೀ (ಚಹಾ) ಬೆಲೆ ಕೂಡ ಹೆಚ್ಚಳವಾಗಲಿದೆ. ಹಿಂದೂಸ್ತಾನ್ ಯೂನಿಲಿವರ್ (ಹೆಚ್‍ಯುಎಲ್) ಮತ್ತು ನೆಸ್ಲೆ ತಮ್ಮ ಅನೇಕ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿವೆ. ಇದರಿಂದಾಗಿ ಮ್ಯಾಗಿ, ಕಾಫಿ, ಟೀ ಪುಡಿಯ ಬೆಲೆಯೂ ಶೇ. 9ರಿಂದ 16ರಷ್ಟು ಹೆಚ್ಚಳವಾಗಲಿದೆ.

Comments

Leave a Reply

Your email address will not be published. Required fields are marked *