ಪಂಚಾಯ್ತಿ ಸದಸ್ಯರಿಂದ ಮನೆ ಮಾರಾಟ- ಅಪ್ಪಚ್ಚು ರಂಜನ್ ಅಕ್ರೋಶ

ಮಡಿಕೇರಿ: ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ವಸತಿ ರಹಿತರಿಗೆ ವಿತರಣೆ ಮಾಡುವ ಮನೆಗಳನ್ನು ಪಂಚಾಯ್ತಿ ಸದಸ್ಯರೇ ಮಾರಾಟ ಮಾಡುತ್ತಿದ್ದಾರೆಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ಹೊರಹಾಕಿದ್ದಾರೆ.

ಕೊಡಗು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆಯುತ್ತಿರೋ ಜಿಲ್ಲಾ ಸಮಗ್ರ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಅರ್ಹರಲ್ಲದಿದ್ದವರಿಗೂ 25 ಸಾವಿರ ಹಣ ಪಡೆದು ಪಂಚಾಯ್ತಿ ಸದಸ್ಯರೇ ಔಟ್ ಹೌಸ್ ಅಥವಾ ಮನೆಗಳನ್ನು ಕಟ್ಟಿಕೊಳ್ಳಲು ಮಾರಾಟ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇಂತಹ ಸದಸ್ಯರನ್ನು ಅನರ್ಹಗೊಳಿಸಿ, ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Comments

Leave a Reply

Your email address will not be published. Required fields are marked *