ನಗರಸಭೆಗೆ ಚುನಾವಣೆ ನಡೆದು ನಾಲ್ಕು ತಿಂಗಳಾದರೂ ಅಧಿಕಾರವಿಲ್ಲ..!

ಮಡಿಕೇರಿ: ನಗರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ನಾಲ್ಕು ತಿಂಗಳುಗಳೇ ಕಳೆದರೂ ಅಧ್ಯಕ್ಷ ಹಾಗೂ ಉಪಧ್ಯಾಕ್ಷರ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿಲ್ಲ. ಇದರ ಪರಿಣಾಮ ಗೆದ್ದು ನಾಲ್ಕು ತಿಂಗಳಾದರೂ ಜನಪ್ರತಿನಿಧಿಗಳು ಅಧಿಕಾರವಿಲ್ಲದೆ ಪರಾದಾಡುವಂತಾಗಿದೆ.

ಮಡಿಕೇರಿಯ ನಗರಸಭೆ ಚುನಾವಣೆ, ಏಪ್ರಿಲ್ 3ನೇ ವಾರದಲ್ಲಿ ನಡೆದು ಫಲಿತಾಂಶವೂ ಹೊರಬಿದ್ದಿತ್ತು. ಚುನಾವಣೆ ನಡೆಯುತ್ತಿದ್ದಂತೆ ಕೋವಿಡ್ ಜಾಸ್ತಿಯಾಗಿದ್ದರಿಂದ ಲಾಕ್ ಡೌನ್ ಜಾರಿಯಾಗಿತ್ತು. ಆದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಆದರೂ ಕೊಡಗಿನಲ್ಲಿ ಮಾತ್ರ ಕಡಿಮೆ ಆಗಿರಲಿಲ್ಲ. ಬಳಿಕ ಕೋವಿಡ್ ಪಾಸಿಟಿವಿಟಿ ರೇಟ್ ಶೇ.2 ಪಸೆರ್ಂಟ್ ಗಿಂತಲೂ ಕಡಿಮೆಯಾಗಿ ಈಗ 15 ದಿನಗಳು ಕಳೆದಿವೆ.

ಕೊಡಗಿನಲ್ಲಿ ಹೇರಿದ್ದ ವೀಕೆಂಡ್ ಲಾಕ್ ಡೌನ್ ಕೂಡ ತೆರವು ಮಾಡಲಾಗಿದೆ. ಆದರೂ ಮಡಿಕೇರಿ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ದಿನಾಂಕ ಮಾತ್ರ ನಿಗದಿಯಾಗಿಲ್ಲ. ಚುನಾವಣೆ ನಡೆದು ಮೂರು ತಿಂಗಳು ಪೂರ್ಣಗೊಂಡಿದ್ದರೂ ಇಂದಿಗೂ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗದೆ ನಗರದ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕಡೆಗಣಿಸಲ್ಪಟ್ಟಿವೆ. ಮಳೆಗಾಲದಲ್ಲಿ ಸುರಿದ ಮಳೆಗೆ ಗುಂಡಿಬಿದ್ದಿರುವ ನಗರದ ರಸ್ತೆಗಳನ್ನು ಮುಚ್ಚೋದಕ್ಕೂ ಸಹ ಸಾಧ್ಯವಾಗಿಲ್ಲ. ಇದನ್ನೂ ಓದಿ: ಕುಮಾರಸ್ವಾಮಿ ಎಲ್ಲಾ ಕ್ಷೇತ್ರದಲ್ಲೂ ಇಬ್ಬಿಬ್ಬರನ್ನು ಇಟ್ಟಿರ್ತಾರೆ: ಎಸ್.ಆರ್ ಶ್ರೀನಿವಾಸ್

ಹೀಗಾಗಿ ವಾಹನ ಸವಾರರು ನರಕಯಾತನೆ ಅನುಭವಿಸಬೇಕಾಗಿದೆ. ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಮೈಸೂರು ಬಿಟ್ಟರೆ ಮಡಿಕೇರಿಯಲ್ಲಿ ನಡೆಯುತ್ತಿದ್ದ ದಸರಾ ಜನೋತ್ಸವಕ್ಕೆ ಇನ್ನು ಕೆಲವು ದಿನಗಳು ಮಾತ್ರವೇ ಬಾಕಿ ಇವೆ. ನಗರಸಭೆ ಆಡಳಿತ ಮಂಡಳಿ ರಚನೆಯಾಗದೆ ಹಿನ್ನೆಲೆ ಎಲ್ಲವೂ ಕಾರ್ಯಕ್ರಮಗಳು ನೆನೆಗುದಿಗೆ ಬಿದ್ದಿವೆ.

ಚುನಾವಣೆ ನಡೆದು ಮೂರು ತಿಂಗಳು ಕಳೆದರೂ, ಆಡಳಿತದ ಚುಕ್ಕಾಣಿ ಹಿಡಿಯದಿರುವುದರಿಂದ ಆಯಾ ವಾರ್ಡ್ ಗಳ ಕೌನ್ಸಿಲರ್ ಗಳು ತಮ್ಮ ವಾರ್ಡ್ ಗಳ ಮತದಾರರಿಗೆ ಮೂಖತೋರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೆ. ಹೀಗಾಗಿ ಆದಷ್ಟು ಬೇಗ ಅಧ್ಯಕ್ಷರು ಮತ್ತು ಉಪಾಧ್ಯರ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಕೌನ್ಸಿಲರ್ ಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ: ರಾಜೂ ಗೌಡ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ನಾವು ಕೂಡ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಸಿಎಂ ಕೂಡ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸದ್ಯದಲ್ಲೇ ಚುನಾವಣೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Comments

Leave a Reply

Your email address will not be published. Required fields are marked *