ಅತ್ಯಾಚಾರ ಆರೋಪಿ ಮನೆಗೆ ಬುಲ್ಡೋಜರ್‌ ನುಗ್ಗಿಸಿದ ಲೇಡಿ ಪೊಲೀಸ್‌

ಭೋಪಾಲ್‌: ಮಹಿಳಾ ಪೊಲೀಸ್‌ ಸಿಬ್ಬಂದಿ ಮಧ್ಯಪ್ರದೇಶದಲ್ಲಿ (Madhya Pradesh) ಅತ್ಯಾಚಾರ ಆರೋಪಿ ಮನೆಗೆ ಬುಲ್ಡೋಜರ್‌ (Operation Bulldozer) ನುಗ್ಗಿಸಿ ನೆಲಸಮಗೊಳಿಸಿರುವ ಘಟನೆ ನಡೆದಿದೆ. ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ತಂಡದ ನೇತೃತ್ವ ವಹಿಸಿದ್ದ ಅಧಿಕಾರಿಯೊಬ್ಬರು, ಅತ್ಯಾಚಾರ ಘೋರ ಅಪರಾಧ. ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಅತ್ಯಾಚಾರದಂತಹ ಅಪರಾಧಗಳು ಇಂತಹ ಶಿಕ್ಷೆಗೆ ಅರ್ಹವಾಗಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 20ನೇ ಮಹಡಿಯಿಂದ ಬಿದ್ದು OYO Rooms ಸಂಸ್ಥಾಪಕ ರಿತೇಶ್ ಅಗರ್ವಾಲ್ ತಂದೆ ಸಾವು!

ರಾಜಧಾನಿ ಭೋಪಾಲ್‌ನಿಂದ ಸುಮಾರು 250 ಕಿಮೀ ದೂರದಲ್ಲಿರುವ ದಾಮೋಹ್‌ನಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. 4ನೇ ಆರೋಪಿ ಕೌಶಲ್ ಕಿಶೋರ್ ಚೌಬೆ ಎಂಬಾತ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಆರೋಪಿ ಜಮೀನೊಂದರಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ಆರೋಪಿ ಕೌಶಲ್ ಕಿಶೋರ್ ಚೌಬೆ ಅಕ್ರಮವಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದ. ಮಹಿಳಾ ಅಧಿಕಾರಿಗಳ ತಂಡ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ, ಆ ಮನೆಯನ್ನು ಕೆಡವಿದೆ. ಮಹಿಳಾ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಇಂತಹ ಕ್ರಮಗಳು ಮುಂದುವರಿಯಬೇಕು ಎಂದು ಠಾಣಾಧಿಕಾರಿ ಪ್ರಶಿತಾ ಕುರ್ಮಿ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ಬಳಿಕ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಬೆಲೆ ಭಾರೀ ಇಳಿಕೆ

Comments

Leave a Reply

Your email address will not be published. Required fields are marked *