ಕೋಳಿಯ ವಿರುದ್ಧ ದೂರು ದಾಖಲಿಸಿದ ಮಹಿಳೆ

-ಠಾಣೆಗೆ ಬಂದ ಕೋಳಿಯ ಮಾಲಕಿ ಕಣ್ಣೀರು ಕಂಡ ಪೊಲೀಸರು ಶಾಕ್

ಭೋಪಾಲ್: ಜನರಲ್ಲಿ ಜಗಳ ಮತ್ತು ವಿವಾದಗಳು ನಡೆದಾಗ ಒಬ್ಬರ ಮೇಲೊಬ್ಬರು ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಕೆಲವೊಂದು ಬಾರಿ ಪ್ರಾಣಿಗಳ ಮೇಲೆ ದೂರು ದಾಖಲಾಗಿರುವ ಪ್ರಕರಣಗಳನ್ನು ಓದಿರುತ್ತೇವೆ. ಮಧ್ಯಪ್ರದೇಶದ ಶಿವಪುರಿ ಪೊಲೀಸ್ ಠಾಣೆಗೆ ಬಂದ ಮಹಿಳೆ ನೆರೆ ಮನೆಯ ಕೋಳಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿದ ಮಹಿಳೆಯ 8 ತಿಂಗಳ ಮಗುವನ್ನು ಕೋಳಿ ತನ್ನ ಕೊಕ್ಕಿನಿಂದ ಕುಕ್ಕಿ ಗಾಯಗೊಳಿಸಿತ್ತು. ಮಗು ತೀವ್ರವಾಗಿ ಗಾಯಗೊಂಡಿದ್ದರಿಂದ ಕಂದನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೋಪಗೊಂಡ ತಾಯಿ ಠಾಣೆಗೆ ಬಂದು ಕೋಳಿಯ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಬೇಕೆಂದು ಪಟ್ಟು ಹಿಡಿದಿದ್ದರು.

ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಕೋಳಿಯ ಮಾಲೀಕರನ್ನು ಕರೆತರುವಂತೆ ಆದೇಶಿಸಿದ್ದರು. ಠಾಣೆಗೆ ಬಂದ ದಂಪತಿ ತಮ್ಮ ಕೋಳಿಯೇ ಮಗುವನ್ನು ಕುಕ್ಕಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದ್ರೆ ಕೋಳಿಯ ಮಾಲಕಿ ಯಾವುದೇ ದೂರು ದಾಖಲಿಸಿಕೊಳ್ಳದಂತೆ ಠಾಣೆಯಲ್ಲಿ ಅಳಲು ಶುರು ಮಾಡಿದ್ದಾರೆ. ಈ ಹಿಂದೆಯೂ ಇದೇ ಕೋಳಿ ಮಗುವನ್ನು ಕುಕ್ಕಿತ್ತು ಎಂದು ಮಾಲೀಕರು ಒಪ್ಪಿಕೊಂಡಿದ್ದಾರೆ. ಕೊನೆಗೆ ಪೊಲೀಸರು ಎರಡು ಕುಟುಂಬಗಳ ಜೊತೆ ಮಾತುಕತೆ ನಡೆಸಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *