ಕಚೇರಿಯ ಎಸಿಗಳನ್ನು ಕಿತ್ತು ಪುನರ್ವಸತಿ ಕೇಂದ್ರಗಳಿಗೆ ಅಳವಡಿಸಿದ ಡಿಸಿ

ಭೋಪಾಲ್: ಕಚೇರಿಯ ಏರ್ ಕಂಡಿಷನರ್ (ಎಸಿ)ಗಳನ್ನ ಕಿತ್ತು ಪುನರ್ವಸತಿ ಕೇಂದ್ರಗಳಿಗೆ ಅಳವಡಿಸುವ ಮೂಲಕ ಜಿಲ್ಲಾಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಮಧ್ಯಪ್ರದೇಶದ ಉಮಾರಿಯಾ ಜಿಲ್ಲಾಧಿಕಾರಿ ಸ್ವರೋಚಿಶ್ ಸೊಮಾವಂಶಿ ಅವರು ತಮ್ಮ ಕೊಠಡಿ ಹಾಗೂ ಕಚೇರಿಯಲ್ಲಿ ಇದ್ದ ಎಸಿಗಳನ್ನು ತೆಗೆಸಿದ್ದಾರೆ. ಬಳಿಕ ಅವುಗಳನ್ನು ಜಿಲ್ಲಾ ಕೇಂದ್ರ ಪುನರ್ವಸತಿ ಕೇಂದ್ರದಲ್ಲಿ ಅಳವಡಿಸಿದ್ದಾರೆ. ಇದರಿಂದ ಬಾಣಂತಿಯರು, ವೃದ್ಧರು ಸೇರಿದಂತೆ ಪುನರ್ವಸತಿ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಅನುಕೂಲವಾಗಿದೆ.

ಇದು ಸ್ವಾಭಾವಿಕ ನಿರ್ಧಾರವಾಗಿದೆ. ಭಾರೀ ಬಿಸಿಲು ಇರುವುದರಿಂದ ಪುನರ್ವಸತಿ ಕೇಂದ್ರದಲ್ಲಿರು ಬಿಸಿ ವಾತಾವರಣವಿತ್ತು. ಹೀಗಾಗಿ ಎಸಿ ಅಳವಡಿಸಲು ಮುಂದಾಗಿದ್ದೇವು. ಆದರೆ ತಕ್ಷಣವೇ ಈ ವ್ಯವಸ್ಥೆ ಕಲ್ಪಿಸುವ ಅನಿವಾರ್ಯತೆ ಉಂಟಾಗಿದ್ದರಿಂದ ಕಚೇರಿಯ ಎಸಿಗಳನ್ನು ಅಲ್ಲಿ ಅಳವಡಿಸಿದ್ದೇವೆ. ಪುನರ್ವಸತಿ ಕೇಂದ್ರದಲ್ಲಿ 4 ವಿಭಾಗಗಳಿದ್ದೂ ಎಲ್ಲ ಕಡೆಯೂ ಎಸಿ ಅಳವಡಿಸಿದ್ದೇವೆ ಎಂದು ಡಿಸಿ ಸ್ವರೋಚಿಶ್ ಸೊಮಾವಂಶಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಜನಸ್ನೇಹಿ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *