ಟಾಯ್ಲೆಟ್‍ನಲ್ಲಿ ವರ ಸೆಲ್ಫಿ ತೆಗೆದರೆ, ವಧುವಿಗೆ ಸಿಗಲಿದೆ 51 ಸಾವಿರ ರೂ

ಭೋಪಾಲ್: ಟಾಯ್ಲೆಟ್‍ನಲ್ಲಿ ವರ ಸೆಲ್ಫಿ ತೆಗೆದರೆ, ವಧುವಿಗೆ 51 ಸಾವಿರ ರೂ. ನೀಡುವ ಹೊಸ ಯೋಜನೆಯನ್ನು ಮಧ್ಯಪ್ರದೇಶ ಸರ್ಕಾರ ಜಾರಿಗೆ ತಂದಿದೆ.

ಮಧ್ಯ ಪ್ರದೇಶದಲ್ಲಿ ಬಯಲು ಮುಕ್ತ ಶೌಚಾಲಯ ಮಾಡಬೇಕು ಎಂದು ಪಣ ತೊಟ್ಟಿರುವ ಮಧ್ಯ ಪ್ರದೇಶ ರಾಜ್ಯ ಸರ್ಕಾರ ಈ ವಿನೂತ ಯೋಜನೆಯನ್ನು ಜಾರಿಗೆ ತಂದಿದೆ. ಶೌಚಾಲಯದಲ್ಲಿ ಮದುವೆಯಾಗುವ ಗಂಡು ಸೆಲ್ಫಿ ತೆಗೆದರೆ ವಧುವಿಗೆ 51 ಸಾವಿರ ಹಣ ಸಿಗಲಿದೆ.

ಮಧ್ಯ ಪ್ರದೇಶದ ಸರ್ಕಾರ ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆ ಆಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಣು ಮಗಳು ಮದುವೆಯಾದರೆ ಆಕೆಗೆ 51 ಸಾವಿರ ನೀಡುತ್ತಿತ್ತು. ಈಗ ಈ ಯೋಜನೆಗೆ ಹೊಸ ನಿಯಮವನ್ನು ಸರ್ಕಾರ ಮಾಡಿದ್ದು, ಈ ಹಣ ವಧುವಿಗೆ ಸೇರಬೇಕು ಎಂದರೆ ಆಕೆಯನ್ನು ಮದುವೆಯಾಗುವ ಹುಡುಗ ತನ್ನ ಮನೆಯಲ್ಲಿರುವ ಶೌಚಾಲಯದಲ್ಲಿ ನಿಂತು ಫೋಟೋ ತೆಗೆದು ಸರ್ಕಾರಕ್ಕೆ ನೀಡಬೇಕು.

ಈ ನಿಯಮವನ್ನು ಮಾಡುವುದರಿಂದ ರಾಜ್ಯದ ಪ್ರತಿಯೊಂದು ಮನೆಯಲ್ಲಿ ಶೌಚಾಲಯ ನಿರ್ಮಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಈ ನಿಯಮ ತಂದಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ಮುಖ್ತಾರ್ ಹಾಸನ್ ಎಂಬ ಅಧಿಕಾರಿ, ನಾವು ಕನ್ಯಾ ವಿವಾಹದ ಆಡಿಯಲ್ಲಿ ಮದುವೆ ಆಗುವವರಿಗೆ ಅರ್ಜಿ ಜೊತೆ ಒಂದು ಶೌಚಾಲಯದ ಜೊತೆ ಇರುವ ಫೋಟೋವನ್ನು ಕೇಳಿದ್ದೇವೆ. ಯಾರು ಫೋಟೋ ನೀಡುವುದಿಲ್ಲ ಅವರ ಅರ್ಜಿ ಅನುಮೋದನೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಈಗ ಈ ನಿಯಮಕ್ಕೆ ಮಧ್ಯಪ್ರದೇಶದಲ್ಲಿ ವಿರೋಧ ವ್ಯಕ್ತವಾಗಿದ್ದು, ನಾವು ಏಕೆ ಶೌಚಾಯಲದಲ್ಲಿ ನಿಂತು ಫೋಟೋ ತೆಗೆಯಬೇಕು. ಆದರ ಬದಲು ಅಧಿಕಾರಿಗಳೇ ನಮ್ಮ ಮನೆಗೆ ಬಂದು ನೋಡಿಕೊಂಡು ಹೋಗಲಿ. ನಾವು ಬೇರೆ ಮನೆಯ ಶೌಚಾಲಯದಲ್ಲಿ ನಿಂತು ಫೋಟೋ ತೆಗೆದು ಕಳುಹಿಸಬಹುದು. ಅದ್ದರಿಂದ ಅಧಿಕಾರಿಗಳು ನಮ್ಮ ಮನೆಗೆ ಬಂದು ನೋಡಿಕೊಂಡು ಹೋಗಲಿ ಎಂದು ಜನರು ಅಸಮಾಧಾನ ಹೊರ ಹಾಕಿದ್ದಾರೆ.

ಈ ನಿಯಮ ಜಾರಿಗೆ ಬಂದ ಮೇಲೆ ಈ ಯೋಜನೆ ಆಡಿಯಲ್ಲಿ ಹಲವಾರು ದಂಪತಿಗಳು ಹಣವನ್ನು ಸ್ವೀಕಾರ ಮಾಡಿಲ್ಲ. ಕಾರಣ ಕೆಲ ಯುವಕರ ಶೌಚಾಲಯದಲ್ಲಿ ಫೋಟೋ ತೆಗೆಸಲು ಒಪ್ಪುತಿಲ್ಲ. ಈ ನಿಯಮವನ್ನು ತೆಗೆದು ಹಾಕಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ಈ ನಿಯಮ ಜಾರಿಗೆ ಬಂದಮೇಲೆ ಸುಮಾರು 600 ರಿಂದ 700 ದಂಪತಿಗಳು ಈ ಯೋಜನೆ ಅಡಿಯಲ್ಲಿ ಬರುವ ಹಣ ಸ್ವೀಕಾರ ಮಾಡಿಲ್ಲ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *