ನವದೆಹಲಿ: ಮಹಾಭಾರತದ ದ್ರೌಪದಿಗೆ 5 ಮಂದಿ ಗಂಡಂದಿರು ಇದ್ದ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಆದರೆ ರಾಜಸ್ಥಾನ ಹಾಗೂ ಮಧ್ಯೆ ಪ್ರದೇಶದ ಗಡಿ ಭಾಗದಲ್ಲಿ ಮಹಿಳೆಯರು ಹಲವು ಪುರುಷರನ್ನು ಮದುವೆಯಾಗುವ ವಿಚಿತ್ರ ಪದ್ಧತಿ ಇದೆ.
ಹೌದು. ಕಲಿಯುಗದಲ್ಲೂ ಹೀಗೆ ಹಲವು ಪತಿಯರಿಗೆ ಒಬ್ಬಳೇ ಪತ್ನಿ ಇರಲು ಸಾಧ್ಯವಾ ಎಂಬ ಪ್ರಶ್ನೆ ಹಲವರಲ್ಲಿ ಇರುತ್ತೆ. ಆದರೆ ಇದಕ್ಕೆ ಉತ್ತರ ಎನ್ನುವಂತೆ ರಾಜಸ್ಥಾನ ಹಾಗೂ ಮಧ್ಯೆ ಪ್ರದೇಶದ ಗಡಿ ಭಾಗದಲ್ಲಿ ಬಹುಪತಿ ಹೊಂದುವ ಪದ್ಧತಿ ಜಾರಿಯಲ್ಲಿದೆ. ವಿಚಿತ್ರ ಎನಿಸಿದರೂ ಇದು ಸತ್ಯ. ಒಂದಕ್ಕಿಂತ ಹೆಚ್ಚು ಪತಿಯರನ್ನು ಹೊಂದಿರುವ ಮಹಿಳೆಯರು ಭಾರತದಲ್ಲಿ ಇದ್ದಾರೆ.

ರಾಜಸ್ಥಾನ ಮತ್ತು ಮಧ್ಯಪ್ರದೇಶದ ಗಡಿ ಭಾಗ ಮುರೆನಾದಲ್ಲಿ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುವ ಮಹಿಳೆಯರಿದ್ದಾರೆ. ಇದು ಹಳೇ ಪದ್ಧತಿಯೇನಲ್ಲ. ಕೆಲ ವರ್ಷಗಳ ಹಿಂದೆ ಅಲ್ಲಿನ ಮುಖಂಡರು ಗ್ರಾಮದ ಒಳಿತಿಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಊರಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿದೆ. ಆದರೆ ಯುವಕರ ಸಂಖ್ಯೆ ಹೆಚ್ಚಿದೆ. ಈ ಕಾರಣಕ್ಕೆ ಗ್ರಾಮದ ಮುಖಂಡರು ಈ ಪದ್ಧತಿಯನ್ನು ಶುರು ಮಾಡಿದ್ದಾರೆ.

ಒಂದು ಮನೆಯಲ್ಲಿ ಒಬ್ಬನೇ ಹುಡುಗನಿದ್ದರೆ ಹುಡುಗಿ ಆತನೊಬ್ಬನನ್ನೇ ಮದುವೆಯಾಗಬೇಕು. ಆದರೆ ಮನೆಯಲ್ಲಿ 8 ಮಂದಿ ಹುಡುಗರಿದ್ದರೆ ಅವರೆಲ್ಲರನ್ನು ಆ ಮಹಿಳೆ ಮದುವೆಯಾಗಬೇಕು. ಹೀಗಾಗಿ ಈ ಗ್ರಾಮದಲ್ಲಿ ಒಬ್ಬ ಪತಿ ಇರುವ ಮಹಿಳೆಯರೂ ಇದ್ದಾರೆ. ಒಂದಕ್ಕಿಂತ ಹೆಚ್ಚು ಪತಿಯರನ್ನು ಹೊಂದಿರುವ ಮಹಿಳೆಯರು ಜೀವನ ನಡೆಸುತ್ತಿದ್ದಾರೆ.

Leave a Reply