ಮದ್ವೆಯಾಗದ್ದರಿಂದ ಆರ್‌ಎಸ್‌ಎಸ್ ನಾಯಕರೇ ಹನಿ ಟ್ರ್ಯಾಪ್‍ಗೆ ಹೆಚ್ಚು ಬಲಿಯಾಗಿದ್ದಾರೆ – ಕಾಂಗ್ರೆಸ್ ನಾಯಕ

ಭೋಪಾಲ್: ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸುತ್ತಿರುವ ಮಧ್ಯಪ್ರದೇಶದ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಹನಿ ಟ್ರ್ಯಾಪ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದೆ.

ಕಾಂಗ್ರೆಸ್ ನಾಯಕ ಮನಕ್ ಅಗರ್‍ವಾಲ್ ಅವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಇದರಲ್ಲಿ ಹೆಚ್ಚು ಆರ್‌ಎಸ್‌ಎಸ್ ನಾಯಕರೇ ತೊಡಗಿದ್ದಾರೆ. ಏಕೆಂದರೆ ಅವರಿಗೆ ಮದುವೆಯಾಗಿರುವುದಿಲ್ಲ. ಹೀಗಾಗಿ ಇಂತಹ ಕಾರ್ಯಕ್ಕೆ ಇಳಿಯುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಎಂಪಿ ಹನಿ ಟ್ರ್ಯಾಪ್ – ರಾಜಕಾರಣಿಗಳು, ಅಧಿಕಾರಿಗಳ ಸಾವಿರಕ್ಕೂ ಅಧಿಕ ವಿಡಿಯೋಗಳು ಪತ್ತೆ

ಆರ್‌ಎಸ್‌ಎಸ್ ನಾಯಕರೇ ಈ ರೀತಿ ಮಾಡುತ್ತಾರೆ ಎನ್ನವುದಕ್ಕೆ ಪ್ರಮುಖ ಕಾರಣ ಅವರು ಮದುವೆಯಾಗಿರುವುದಿಲ್ಲ ಎನ್ನುವುದು. ಆರ್‌ಎಸ್‌ಎಸ್ ಮುಖಂಡರು ಮದುವೆಯಾಗಬೇಕು, ಮೋಹನ್ ಭಾಗವತ್ ಸಹ ಮದುವೆಯಾಗಬೇಕು ಎಂದು ಅಗರ್‍ವಾಲ್ ಹೇಳಿದ್ದಾರೆ ಎಂಬುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕುರಿತು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಕಾಲದಿಂದಲೂ ಇದು ಪ್ರಾರಂಭವಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ. ಇದೀಗ ಈ ಗ್ಯಾಂಗ್ 5 ರಿಂದ 6 ರಾಜ್ಯಗಳಲ್ಲಿ ಹರಡಿದೆ ಎಂದು ಅಗರ್‍ವಾಲ್ ಆರೋಪಿಸಿದರು. ಇದನ್ನೂ ಓದಿ: ಬಾಲಿವುಡ್ ನಟಿಯರು ಬೇಡ, ಕಾಲೇಜ್‍ ಹುಡುಗಿಯರು ಬೇಕು – ಬಯಲಾಯ್ತು ರಾಜಕಾರಣಿಗಳ ಮುಖ 

ಹನಿಟ್ರ್ಯಾಪ್ ಪ್ರಕರಣದಲ್ಲಿ ಎಸ್‍ಐಟಿ ಪೊಲೀಸರು ಹಲವು ಮಂದಿಯನ್ನು ಬಂದಿಸಿದ್ದಾರೆ. ಬಂಧನಕ್ಕೆ ಒಳಗಾದವರ ಪೈಕಿ ಕಾಂಗ್ರೆಸ್ ಐಟಿ ಸೆಲ್ ಮಾಜಿ ಮುಖ್ಯಸ್ಥ ಅಮಿತ್ ಸೋನಿ ಅವರ ಪತ್ನಿ ಬರ್ಕಾ ಸೋನಿ ಸಹ ಇರುವುದು ವಿಶೇಷ.

ದಿನ ದಿನಕ್ಕೂ ಪ್ರಕರಣ ಭಾರೀ ತಿರುವು ಪಡೆದುಕೊಳ್ಳುತ್ತಿದ್ದು, ಅಚ್ಚರಿಯ ಮಾಹಿತಿ ಬಹಿರಂಗವಾಗುತ್ತಿದೆ. ಇನ್ನೂ ಭಯಾನಕ ವಿಷಯವೆಂದರೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಒಟ್ಟು 1,000 ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು ಮೂರು ರಾಜ್ಯಗಳಲ್ಲಿರುವ ಈ ಗ್ಯಾಂಗ್‍ನ ಸದಸ್ಯರ ಬಳಿ ಈ ಒಂದು ಸಾವಿರಕ್ಕೂ ಅಧಿಕ ವಿಡಿಯೋಗಳಿದ್ದು, ಮಧ್ಯಪ್ರದೇಶ, ಛತ್ತಿಸ್‍ಗಡ ಹಾಗೂ ಮಹಾರಾಷ್ಟ್ರಗಳಲ್ಲಿನ ಸದಸ್ಯರ ಬಳಿ ಇವೆ ಎಂದು ಎಸ್‍ಐಟಿ ತನಿಖೆ ವೇಳೆ ಬಹಿರಂಗವಾಗಿದೆ. ಈ ಹನಿ ಟ್ರ್ಯಾಪ್ ಗ್ಯಾಂಗ್ ಸುಲಿಗೆ ಮಾಡಿದ್ದಲ್ಲದೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಹಾಯದಿಂದ ಸರ್ಕಾರದ ಪ್ರಮುಖ ಗುತ್ತಿಗೆಗಳನ್ನು ಪಡೆದುಕೊಂಡಿದೆ ಎಂದು ಪೊಲೀಸರು ಮಾಹಿತಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್

ಮಾಜಿ ಮುಖ್ಯಮಂತ್ರಿ, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಜನ ಹನಿ ಟ್ರ್ಯಾಪ್‍ಗೆ ಬಲಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ 6 ಜನರನ್ನು ಎಸ್‍ಐಟಿ ಬಂಧಿಸಿದೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳೊಂದಿಗೆ ಸೇರಿ ಹಲವಾರು ಭೋಪಾಲ್ ಮೂಲದ ಪತ್ರಕರ್ತರು ಸಹ ಭಾಗಿಯಾಗಿದ್ದಾರೆ ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಹಿಂದಿ ಪತ್ರಿಕೆಯೊಂದರ ಸ್ಥಾನಿಕ ಸಂಪಾದಕ, ಸುದ್ದಿ ವಾಹಿನಿಯ ಕ್ಯಾಮೆರಾಮೆನ್ ಹಾಗೂ ಸ್ಥಳೀಯ ವಾಹಿನಿಯ ಮಾಲೀಕ ಸಹ ಭಾಗಿಯಾಗಿದ್ದಾರೆ ಎಂದು ಎಸ್‍ಐಟಿ ಪತ್ತೆ ಹಚ್ಚಿದೆ. ಪತ್ರಕರ್ತರು ಹನಿ ಟ್ರ್ಯಾಪ್‍ನ ಕಿಂಗ್ ಪಿನ್ ಶ್ವೇತಾ ಜೈನ್, ರಾಜಕಾರಣಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *