ಪ್ರಧಾನಿ ಮೋದಿಯವರ 4 ಗಂಟೆ ಭೇಟಿಗೆ 23 ಕೋಟಿ ಖರ್ಚು- ಮಧ್ಯಪ್ರದೇಶ ಸರ್ಕಾರ

ಭೋಪಾಲ್: ಪ್ರಧಾನಿ ಮೋದಿ ಅವರ ನಾಲ್ಕು ಗಂಟೆಯ ಭೇಟಿಗೆ ಮಧ್ಯಪ್ರದೇಶ ಸರ್ಕಾರ ಸುಮಾರು 23 ಕೋಟಿ ರೂ. ಖರ್ಚು ಮಾಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಅಪಾರ ಸಂಖ್ಯೆಯಲ್ಲಿ ಬುಡಕಟ್ಟು ಜನಸಮುದಾಯವನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶ. ಇಲ್ಲಿ ಬುಡಕಟ್ಟು ಯೋಧರ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟನೆಗೆ ಮುಂದಿನ ವಾರ ಪ್ರಧಾನಿ ಮೋದಿ ಅವರು ಆಗಮಿಸಲಿದ್ದಾರೆ. ಅದಕ್ಕಾಗಿ ಭಾರಿ ಸಿದ್ಧತೆ ನಡೆದಿದೆ. ರಾಜಧಾನಿಯಲ್ಲಿ ನಡೆಯುವ ನಾಲ್ಕು ಗಂಟೆಗಳ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. 1 ಗಂಟೆ 15 ನಿಮಿಷ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ 4 ಗುಮ್ಮಟಗಳನ್ನು ನಿರ್ಮಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಮೀಸಲಿಟ್ಟಿರುವ ಒಟ್ಟು ಮೊತ್ತದಲ್ಲಿ 13 ಕೋಟಿ ರೂ. ಹಣವನ್ನು ಜಂಬೂರಿ ಮೈದಾನದಲ್ಲಿ ಅಂದು ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಜನರನ್ನು ಸೇರಿಸಲು ವಿನಿಯೋಗಿಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮನೆಯಲ್ಲಿದ್ರೂ ಮಾಸ್ಕ್ ಹಾಕ್ಬೇಕಿದೆ, ಅನಿವಾರ್ಯವಾದ್ರೆ ದೆಹಲಿಯಲ್ಲಿ ಲಾಕ್‍ಡೌನ್ ಮಾಡಿ – ಸುಪ್ರೀಂ ಕಳವಳ

ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಭಗವಾನ್ ಬಿರ್ಸಾ ಮುಂಡ ಸ್ಮರಣಾರ್ಥವಾಗಿ ನ.15ರಂದು ಮಧ್ಯಪ್ರದೇಶದಲ್ಲಿ ಜಂಜತಿಯ ಗೌರವ ದಿವಸವನ್ನು ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಜಂಬೂರಿ ಮೈದಾನದಲ್ಲಿ ದೇಶದ ಮೊದಲ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿರುವ ಹಬೀಬ್‍ಗಂಜ್ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಬೇರೆ ಗುಂಪಿನ ರಕ್ತ ಹಾಕಿದ ವೈದ್ಯರು – ಯುವತಿ ಸಾವು

ಜಂಬೂರಿ ಮೈದಾನದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಸಿದ್ಧತೆಗಾಗಿ 300 ಕೆಲಸಗಾರರನ್ನು ನಿಯೋಜಿಸಲಾಗಿದೆ. 52 ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು 12 ಕೋಟಿ ರೂ. ಸಾರಿಗೆ ವೆಚ್ಚ. ಗುಮ್ಮಟ, ಟೆಂಟ್‍ಗಳು, ಅಲಂಕಾರ, ಪ್ರಚಾರಕ್ಕಾಗಿ 9 ಕೋಟಿ ರೂ. ವೆಚ್ಚ ಮಾಡಲಾಗಿದೆ.

Comments

Leave a Reply

Your email address will not be published. Required fields are marked *