‘ಏಕ್ ದೋ ತೀನ್ ಚಾರ್’ ರೀಮೇಕ್ ಹಾಡಿಗೆ ಹೆಜ್ಜೆ ಹಾಕಿ ಮಾಧುರಿಗೆ ಕಾಲ್ ಮಾಡಿದ ಜಾಕ್ವೇಲಿನ್!

ಮುಂಬೈ: ಬಾಲಿವುಡ್ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ಅವರ 80 ರ ದಶಕದ ಫೇಮಸ್ `ಎಕ್ ದೋ ತೀನ್ ಚಾರ್’ ಹಾಡಿನ ರಿಮೇಕ್‍ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಇತ್ತ ಮಾಧುರಿ ದೀಕ್ಷಿತ್ ಸಹ ಮುನಿಸಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ.

ಕೆಲವು ದಿನಗಳ ಹಿಂದೆ ಟೈಗರ್ ಶ್ರಾಫ್ ಅಭಿನಯದ `ಭಾಗಿ-2′ ಸಿನಿಮಾದ ಹಾಡೊಂದು ರಿಲೀಸ್ ಆಗಿದೆ. ಈ ಹಿಂದೆ ಮಾಧುರಿ ದೀಕ್ಷಿತ್ ನರ್ತಿಸಿದ ಹಾಡಿನ ನ್ಯೂ ವರ್ಷನ್ ಗೆ ಮರ್ಡರ್-2 ಖ್ಯಾತಿಯ ಸುಂದರಿ ಜಾಕ್ವೇಲಿನ್ ಹಜ್ಜೆ ಹಾಕಿದ್ದಾರೆ. ಆದ್ರೆ ಜಾಕ್ವೇಲಿನ್ ತುಂಬಾ ಸೆಕ್ಸಿಯಾಗಿ ಕಾಣಿಸಿಕೊಂಡಿದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಮಾಧುರಿಗೆ ಕಾಲ್ ಮಾಡಿದ ಜಾಕ್ವೇಲಿನ್: ಜಾಕ್ವೇಲಿನ್ ಯೂ ಟ್ಯೂಬ್ ನಲ್ಲಿ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದ್ದಂತೆ ಮಾಧುರಿ ದೀಕ್ಷಿತ್ ಅವ್ರಿಗೆ ಕಾಲ್ ಮಾಡಿದ್ದಾರೆ. ಆದ್ರೆ ಮಾಧುರಿ ಮಾತ್ರ ಕಾಲ್ ರಿಸೀವ್ ಮಾಡದೇ ಅಸಮಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೂ ಸುಮ್ಮನಾಗದ ಜಾಕ್ವೇಲಿನ ‘ಏಕ್ ದೋ ತೀನ್ ಚಾರ್’ ಹಾಡಿನ ಮೂಲಕ ನಾನು ನಿಮಗೆ ಗೌರವ ಸಲ್ಲಿಸುತ್ತಿದ್ದೇನೆ ಎಂಬ ಸಂದೇಶವನ್ನು ಸಹ ರವಾನೆ ಮಾಡಿದ್ದು, ಮಾಧುರಿ ಮಾತ್ರ ಯಾವುದಕ್ಕೂ ಉತ್ತರ ನೀಡಿಲ್ಲ ಅಂತಾ ಹೇಳಲಾಗುತ್ತಿದೆ.

1988ರಲ್ಲಿ ತೆರೆಕಂಡ ‘ತೇಜಾಬ್’ ಚಿತ್ರದಲ್ಲಿನ ಏಕ್ ದೋ ತೀನ್ ಹಾಡಿಗೆ ಬಾಲಿವುಡ್‍ನ ಖ್ಯಾತ ನೃತ್ಯ ಸಂಯೋಜಕಿಯಾದ ಸರೋಜ್ ಖಾನ್ ಕೊರಿಯೊಗ್ರಾಫಿ ಮಾಡಿದ್ರು. ಸರೋಜ್ ಖಾನ್ ಸಹ ಜಾಕ್ವೇಲಿನ್ ನ ಸೆಕ್ಸಿ ಮೂವ್ ಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜನ ಇಂದಿಗೂ ಮಾಧುರಿ ದೀಕ್ಷಿತ್ ರನ್ನು ಏಕ್ ದೋ ತೀನ್ ಹಾಡಿನ ಮೂಲಕವೇ ಗುರುತಿಸ್ತಾರೆ.

ಈ ಹಿಂದೆ ಮಾಧುರಿ ಅಭಿನಯದ ‘ಥಾಣೇದಾರ್’ ಸಿನಿಮಾದ ‘ತಮ್ಮಾ.. ತಮ್ಮಾ..’ ಹಾಡಿಗೆ `ಬದ್ರಿನಾಥ್ ಕೀ ದುಲ್ಹನಿಯಾ’ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ವರುಣ್ ಧವನ್ ಹೆಜ್ಜೆ ಹಾಕಿದ್ರು. ಈ ವೇಳೆ ಮಾಧುರಿ ದೀಕ್ಷಿತ್ ಇಬ್ಬರ ಡ್ಯಾನ್ಸ್ ಗೂ ಮೆಚ್ಚುಗೆಯನ್ನು ಸೂಚಿಸಿದ್ರು. ಆದ್ರೆ ಈ ಬಾರಿ ಜಾಕ್ವೇಲಿನ್ ಸೆಕ್ಸಿ ಮೂವ್ಸ್ ಗಳಿಗೆ ಮಾಧುರಿ ದೀಕ್ಷಿತ್ ಬೇಸರವಾದಂತೆ ಕಾಣಿಸುತ್ತಿದೆ.

https://youtu.be/MS5BLS2sIDM

Comments

Leave a Reply

Your email address will not be published. Required fields are marked *