12ರ ಬಾಲಕನಿಗೆ ಮದರಸ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

ಮಂಗಳೂರು: 12ರ ಹರೆಯದ ಬಾಲಕನಿಗೆ ಮದರಸ ಶಿಕ್ಷಕ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಮಸೀದಿಯಲ್ಲಿ ನಡೆದಿದೆ.

ಮಸೀದಿ ಉಸ್ತಾದ್ ಅನ್ವರ್ ಮೌಲ್ವಿ ಲೈಂಗಿಕ ದೌರ್ಜನ್ಯವೆಸಗಿದ ಮೌಲ್ವಿ. ಅನ್ವರ್ ಮದರಸಕ್ಕೆ ಹೋಗಿದ್ದಾಗ ಮೌಲ್ವಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ಹೇಳಿದಲ್ಲಿ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನಂತೆ.

ಮೌಲ್ವಿಯ ಬೆದರಿಕೆಗೆ ಹೆದರಿ ಬಾಲಕ ಮದರಸ ಮತ್ತು ನಮಾಜ್‍ಗೂ ಹೋಗದೆ ಮನೆಯಲ್ಲೇ ಉಳಿದಿದ್ದನು. ಇದನ್ನು ಕಂಡ ಬಾಲಕನ ತಾಯಿ ಏನಾಯಿತು ಎಂದು ಪ್ರಶ್ನಿಸಿದ್ದಾರೆ. ಆಗ ಬಾಲಕ ನಡೆದ ವಿಷಯವನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾನೆ.

ಸದ್ಯ ಈ ವಿಚಾರ ತಿಳಿದ ಬಾಲಕನ ತಾಯಿ, ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಮಸೀದಿ ಉಸ್ತಾದ್ ಅನ್ವರ್ ಮೌಲ್ವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *