ಆಸ್ತಿ, ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ: ದರ್ಶನ್‌ಗೆ ಜೈಲೂಟ ಫಿಕ್ಸ್‌ – ಕೋರ್ಟ್‌ ಹೇಳಿದ್ದೇನು?

ಬೆಂಗಳೂರು: ಗೆಳತಿ ಪವಿತ್ರಾಗೌಡಗೆ (Pavithra Gowda) ಅಶ್ಲೀಲ ಸಂದೇಶ ರವಾನಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಜೈಲು ಸೇರಿರುವ ನಟ ದರ್ಶನ್‌ಗೆ (Darshan) ಜೈಲೂಟ ಫಿಕ್ಸ್ ಆಗಿದೆ.

ಮನೆಯೂಟ (Home Food), ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್ (Maagsitrate Court) ವಜಾಗೊಳಿಸಿದೆ. ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಅರ್ಜಿ ವಜಾ ಬೆನ್ನಲ್ಲೇ ಜುಲೈ 29 ರಂದು ಹೈಕೋರ್ಟ್‌ನಲ್ಲಿ (High Court) ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ನಿರ್ಧರಿಸಿದ್ದಾರೆ.

ಅರ್ಜಿ ವಜಾಗೊಂಡ ವಿಷಯ ಜೈಲಾಧಿಕಾರಿ ದರ್ಶನ್‌ಗೆ ತಿಳಿಸುತ್ತಿದ್ದಂತೆ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಕಳೆದ ನಾಲ್ಕು ದಿನಗಳಿಂದ ಜ್ವರ ಹಿನ್ನೆಲೆ ಜೈಲು ಹಿರಿಯ ವೈದ್ಯಾಧಿಕಾರಿಗಳು ದರ್ಶನ್‌ಗೆ ಚಿಕಿತ್ಸೆ ನೀಡ್ತಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ 1 ಲಕ್ಷ ಮನೆ ಯೋಜನೆ – ಫಲಾನುಭವಿಗಳಿಗೆ 1 ಲಕ್ಷ ರೂ. ಹೊರೆ ಕಡಿಮೆ ಮಾಡಲು ನಿರ್ಧಾರ

ದರ್ಶನ್ ಅರ್ಜಿ ತಿರಸ್ಕಾರದ 16 ಪುಟಗಳ ಆದೇಶ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ದರ್ಶನ್ ಮನೆ ಊಟದ ಅರ್ಜಿ ವಜಾಗೊಳ್ಳಲು ಹಲವಾರು ಕಾರಣಗಳನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್ ಕೊಟ್ಟಿದೆ. ಇದನ್ನೂ ಓದಿ: Rashtrapati Bhavan| ದರ್ಬಾರ್ ಹಾಲ್, ಅಶೋಕ್ ಹಾಲ್ ಇನ್ಮುಂದೆ ಗಣತಂತ್ರ, ಅಶೋಕ ಮಂಟಪವಾಗಿ ಮರುನಾಮಕರಣ

ಕೋರ್ಟ್ ಹೇಳಿದ್ದೇನು?
ಕಾನೂನಿಗೆ ಎಲ್ಲರೂ ಒಂದೇ, ಕೈದಿಗಳಲ್ಲಿ ಯಾವುದೇ ಭೇದವಿಲ್ಲ. ಆಸ್ತಿ ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ವಿಚಾರಣಾಧೀನ ಕೈದಿಗಳಿಗೆ ಮನೆಯೂಟ ನೀಡಬಹುದು. ಆದರೆ ಕೊಲೆ ಪ್ರಕರಣದ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ.

ದರ್ಶನ್ ವಿಚಾರದಲ್ಲಿ ಮೂಲಭೂತ ಹಕ್ಕಿಗೆ ಧಕ್ಕೆ ಕಂಡು ಬಂದಿಲ್ಲ. ಜೈಲಿನ ಊಟ ಕಳಪೆ ಗುಣಮಟ್ಟ ಎಂಬ ಆರೋಪ ಕೇಳಿಬಂದಿಲ್ಲ. ದರ್ಶನ್‌ಗೆ ಜೈಲಿನಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗಿದೆ.

ಮನುಷ್ಯನಿಗೆ ಬೇಕಾದ ಪೌಷ್ಠಿಕಾಂಶ ಜೈಲಿನ ಊಟ ಒಳಗೊಂಡಿದೆ. ನ್ಯಾಯಾಂಗ ಬಂಧನ ದಿನದಿಂದಲೇ ಆರೋಗ್ಯ (Health) ಸಮಸ್ಯೆ ಒಪ್ಪಲಾಗಲ್ಲ. ದರ್ಶನ್ ಬೆಡ್ ರೆಸ್ಟ್‌ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ. ಬೇರೇನೂ ಹೇಳಿಲ್ಲ. ಪ್ರೋಟಿನ್ ಡಯಟ್ ಕೊಡಬೇಕೆಂದು ವೈದ್ಯರು ಹೇಳಿಲ್ಲ.

ವಿಶೇಷ ಡಯಟ್ ಆಹಾರ ನೀಡಬೇಕಾದ್ರೆ ಜೈಲು ವೈದ್ಯರ ಒಪ್ಪಿಗೆ ಬೇಕಾಗುತ್ತದೆ. ದರ್ಶನ್ ವಿಚಾರದಲ್ಲಿ ವೈದ್ಯರು ವಿಶೇಷ ಆಹಾರಕ್ಕೆ ಶಿಫಾರಸು ಮಾಡಿಲ್ಲ. ದರ್ಶನ್ ಬೆನ್ನು ನೋವು ಹಾಗೂ ಕಾಲು ನೋವಿನಿಂದ ಬಳಲುತ್ತಿರುವ ಕಾರಣ ಬೆಡ್ ರೆಸ್ಟ್‌ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಉಳಿದಂತೆ ಬೇರೆ ಸಮಸ್ಯೆಗಳಿಲ್ಲ.

ವ್ಯಕ್ತಿ ಸಮಾಜದ ಉನ್ನತ ಸ್ಥಾನದಲ್ಲಿದ್ದರೂ ಜೈಲಿನಲ್ಲಿ ತಾರತಮ್ಯ ಮಾಡಲಾಗುವುದಿಲ್ಲ. ಇಲ್ಲಿ ಎಲ್ಲರೂ ಸಮಾನರೇ. ಜಾತಿ ಧರ್ಮ ಅಸ್ತಿ ಅಂತಸ್ತು ಲೆಕ್ಕಕ್ಕೆ ಬರುವುದಿಲ್ಲ.