ಆರ್‌ಎಸ್‌ಎಸ್ ಚಡ್ಡಿ ಹಾಕಿಕೊಳ್ಳಿ ಆಗ ಸಂಸ್ಕೃತಿ ಗೊತ್ತಾಗುತ್ತೆ: ಸಿದ್ದು, ಡಿಕೆಶಿಗೆ ರೇಣುಕಾಚಾರ್ಯ ಸವಾಲ್

ದಾವಣಗೆರೆ: ಆರ್‌ಎಸ್‌ಎಸ್ ಬಗ್ಗೆ ಕೇವಲವಾಗಿ ಮಾತನಾಡುವ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರೇ ನೀವು ಆರ್‌ಎಸ್‌ಎಸ್ ಕಚೇರಿಗೆ ಬನ್ನಿ. ಅಲ್ಲಿ ಆರ್‌ಎಸ್‌ಎಸ್ ಚಡ್ಡಿ ಹಾಕಿಕೊಳ್ಳಿ ಆಗ ಆರ್‌ಎಸ್‌ಎಸ್  ಸಂಸ್ಕೃತಿ ಬಗ್ಗೆ ಗೊತ್ತಾಗುತ್ತೆ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸವಾಲ್ ಹಾಕಿದರು.

ಸಾಸ್ವೇಹಳ್ಳಿಯಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‍ನವರಿಗೆ ನಾನು ಬಹಿರಂಗವಾಗಿ ಸವಾಲ್ ಹಾಕುತ್ತೇನೆ, ಈ ಚಡ್ಡಿ ದೇಶವನ್ನು ಕಾಯುತ್ತಿದೆ. ತಮ್ಮನ್ನು ತಾವು ದೇಶಕ್ಕಾಗಿ ಆರ್‌ಎಸ್‌ಎಸ್ ನವರು ಅರ್ಪಿಸಿಕೊಂಡಿದ್ದಾರೆ. ಪ್ರಕೃತಿ ವಿಕೋಪ ಸೇರಿದಂತೆ ಬೇರೆ ಬೇರೆ ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಡಿಕೆಶಿ ಹಾಗೂ ಸಿದ್ದರಾಮಯ್ಯನವರು ಒಮ್ಮೆ ಆರ್‌ಎಸ್‌ಎಸ್ ಶಾಖೆಗೆ ಭೇಟಿ ನೀಡಿ. ಅಲ್ಲಿಗೆ ಬಂದು ಆರ್‌ಎಸ್‌ಎಸ್ ಚಡ್ಡಿ ಧರಿಸಿ ಆಗ ಆರ್‌ಎಸ್‌ಎಸ್ ಸಂಸ್ಕೃತಿ ಎಂತಹದ್ದು ಎನ್ನುವುದು ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ಟೋಲ್ ಪ್ಲಾಜಾ ನೌಕರರ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ

ಆರ್‌ಎಸ್‌ಎಸ್ ದೇಶಾಭಿಮಾನ ಹೇಳಿಕೊಡುತ್ತೆ. ಆದರೆ ಕಾಂಗ್ರೆಸ್ ಭಯೋತ್ಪಾದನೆ ಹೇಳಿಕೊಡುತ್ತೆ. ಆರ್‌ಎಸ್‌ಎಸ್ ದೇಶವನ್ನು ಆರಾಧಿಸಿದರೆ, ಕಾಂಗ್ರೆಸ್‍ನವರು ಭಯೋತ್ಪಾದಕರನ್ನು ಹಾಗೂ ಉಗ್ರಗಾಮಿಗಳನ್ನು ಆರಾಧಿಸುತ್ತಾರೆ. ಆರ್‌ಎಸ್‌ಎಸ್ ಚಡ್ಡಿ ಸುಟ್ಟರೆ ಸಿದ್ದರಾಮಯ್ಯನವರೇ ಭಸ್ಮ ಆಗುತ್ತಾರೆ. ಭಸ್ಮಾಸುರನ ಕಥೆ ಕೇಳಿದ್ದೀರಲ್ಲವೇ, ಭಸ್ಮಾಸುರ ಎಲ್ಲಾರ ತಲೆಮೇಲೆ ಕೈಇಟ್ಟು ಕೊನೆಗೆ ತನ್ನ ಮೇಲೆ ತಾನು ಕೈ ಇಟ್ಟು ಭಸ್ಮ ಆಗೋ ಹಾಗೇ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಭಸ್ಮ ಆಗುತ್ತಾರೆ.  ಇದನ್ನೂ ಓದಿ: ಸಂಬಂಧದ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ, ಆದ್ರೆ ಕೊಲೆ ಮಾಡಿಲ್ಲ: ಅನಂತರಾಜು ಪತ್ನಿ

Siddaramaiah

ಈ ಕಾಂಗ್ರೆಸ್‍ಗೆ ದೇಶದಲ್ಲಿ ಅಡ್ರೇಸ್ ಇಲ್ಲ. ರಾಜ್ಯದಲ್ಲಿಯೂ ಅಡ್ರೇಸ್ ಇಲ್ಲ ಎಂದರು. ಅಲ್ಲದೆ ಸಚಿವ ಸಂಪುಟದ ಬಗ್ಗೆ ನನಗೆ ಗೊತ್ತಿಲ್ಲ ನಾನು ಕೇವಲ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ ಎಂದರು.

Comments

Leave a Reply

Your email address will not be published. Required fields are marked *