ಕಿರುಕುಳದಿಂದ ಯುವತಿಯನ್ನು ರಕ್ಷಿಸಿದ ಗುಂಪಿನಿಂದಲೇ ಗ್ಯಾಂಗ್ ರೇಪ್

ಲಕ್ನೋ: ಲೈಂಗಿಕ ಕಿರುಕುಳ ನೀಡುತ್ತಿದ್ದವನಿಂದ ಯುವತಿಯನ್ನು ರಕ್ಷಿಸಿದ 6 ಮಂದಿ ಯುವಕರೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕ್ರೂರ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ಬುಧವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನೋಯ್ಡಾದ 21 ವರ್ಷದ ಯುವತಿ ತನ್ನ ಕುಟುಂಬವನ್ನು ಸಾಕಲು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಆಕೆಗೆ ವ್ಯಕ್ತಿಯೋರ್ವನ ಪರಿಚಯವಾಗಿತ್ತು. ಆ ವ್ಯಕ್ತಿ ನಿನಗೆ ಕೆಲಸ ಕೊಡಿಸುತ್ತೇನೆ, ಆ ಬಗ್ಗೆ ಮಾತನಾಡಬೇಕು ಎಂದು ಬುಧವಾರ ರಾತ್ರಿ 7 ಗಂಟೆ ವೇಳೆಗೆ ಪಾರ್ಕ್ ವೊಂದರಲ್ಲಿ ಆತನನ್ನು ಭೇಟಿಯಾಗುವಂತೆ ಯುವತಿಗೆ ಹೇಳಿದ್ದನು. ಆತನ ಮಾತು ನಂಬಿ ಯುವತಿ ಪಾರ್ಕಿಗೆ ಹೋಗಿದ್ದಳು. ಆದರೆ ಅಲ್ಲಿ ವರಸೆ ಬದಲಿಸಿದ ವ್ಯಕ್ತಿ ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಇದನ್ನೂ ಓದಿ:ಬಾಲಕಿಯನ್ನು ಮಂಚಕ್ಕೆ ಕಟ್ಟಿ 16ರ ಬಾಲಕನಿಂದ ರೇಪ್

ಈ ವೇಳೆ ಸ್ಥಳದಲ್ಲಿದ್ದ 6 ಮಂದಿ ಯುವಕರು ಯುವತಿಯ ಸಹಾಯಕ್ಕೆ ಬಂದು, ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಅಲ್ಲಿಂದ ಓಡಿಸಿದರು. ಬಳಿಕ ಯವತಿ ಮೇಲೆ ತಾವೇ ಸಾಮೂಹಿಕ ಅತ್ಯಾಚಾರ ನಡೆಸಿ ವಿಕೃತಿ ಮೆರೆದಿದ್ದರು. ಘಟನೆ ಬಳಿಕ ಯುವತಿ ಈ ಸಂಬಂಧ ಮೂರ್ನಾಲ್ಕು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೂ ಯಾರು ದೂರು ತೆಗೆದುಕೊಂಡಿಲ್ಲ. ಕೊನೆಗೆ ಶುಕ್ರವಾರ ಪೊಲೀಸರು ಯುವತಿಯ ದೂರು ಪಡೆದು, ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಪತ್ನಿ ಮನೆಯಲಿಲ್ಲ, ಬಂದು ಅಡುಗೆ ಮಾಡು’- ನಡುರಾತ್ರಿ ವಿದ್ಯಾರ್ಥಿನಿಗೆ ಪ್ರೊಫೆಸರ್ ಮೆಸೇಜ್

ಸದ್ಯ ಯುವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354, 376 ಮತ್ತು 511 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:ಫೇಸ್‍ಬುಕ್‍ನಲ್ಲಿ ಪರಿಚಯ- ನಂತ್ರ ಚಾಟಿಂಗ್, ಮೀಟಿಂಗ್, ಚೀಟಿಂಗ್

ಆರೋಪಿಗಳ ಬಗ್ಗೆ ನಿಖರ ಮಾಹಿತಿ ಇಲ್ಲ, ಅಲ್ಲದೆ ಅವರ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ಕೂಡ ಇಲ್ಲ. ಹೀಗಾಗಿ ಅವರನ್ನು ಪತ್ತೆಹಚ್ಚುವುದು ಕಷ್ಟದ ಕೆಲಸವಾಗಿದೆ. ಸದ್ಯ ಆರೋಪಿಗಳಲ್ಲಿ ಮೂವರು ಘಟನೆ ನಡೆದ ಸ್ಥಳದ ಸುತ್ತಮುತ್ತಲು ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.

ಅಲ್ಲದೆ ಆರೋಪಿಗಳೆಲ್ಲರೂ 20ರಿಂದ 25 ವರ್ಷದ ವಯಸ್ಸಿನವರು, ಅವರನ್ನು ಹುಡುಕಿ ಕೊಟ್ಟವರಿಗೆ 25 ಸಾವಿರ ಬಹುಮಾನ ಹಣನವನ್ನು ಕೂಡ ಪೊಲೀಸರು ಘೋಷಿಸಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಮುಂದುವರಿದಿದೆ.

Comments

Leave a Reply

Your email address will not be published. Required fields are marked *