ತಾಯಿ ಶವದೊಂದಿಗೆ 10 ದಿನ ಮನೆಯಲ್ಲೇ ಕಾಲ ಕಳೆದ ಮಗಳು

crime

ಲಕ್ನೋ: ಯುವತಿಯೊಬ್ಬಳು ತನ್ನ ತಾಯಿಯ ಶವದೊಂದಿಗೆ 10 ದಿನ ಮನೆಯೊಳಗೆ ಕಾಲ ಕಳೆದ ಘಟನೆ ಲಕ್ನೋದ ಇಂದಿರಾ ನಗರದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್)ನಿಂದ ನಿವೃತ್ತಿಯಾಗಿರುವ ಸುನೀತಾ ದೀಕ್ಷಿತ್ ಎಂದು ಗುರುತಿಸಲಾಗಿದೆ. ಒಂದು ಕೋಣೆಯಲ್ಲಿ 26 ವರ್ಷದ ಅಂಕಿತಾ ದೀಕ್ಷಿತ್ ವಾಸವಾಗಿದ್ದರೆ, ಸುನೀತ ದೀಕ್ಷಿತ್ ಅವರ ಶವ ಮತ್ತೊಂದು ಕೋಣೆಯಲ್ಲಿ ಬಿದ್ದಿತ್ತು. ಅಲ್ಲದೇ ತನ್ನ ತಾಯಿ ಮೃತಪಟ್ಟಿರುವ ಬಗ್ಗೆ ಕುಟುಂಬಸ್ಥರಿಗೆ ಕೂಡ ಯುವತಿ ಮಾಹಿತಿ ನೀಡಿಲ್ಲ. ಆದರೆ ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಆಜಾನ್ ವಿರೋಧಿಸಿ ಜಮ್ಮು ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ

crime

ನಂತರ ಸ್ಥಳಕ್ಕಾಗಮಿಸಿದ ಲಕ್ನೋ ಪೊಲೀಸರು ಮೃತ ಸುನೀತಾ ದೀಕ್ಷಿತ್ ಶವವನ್ನು ಹೊರತೆಗೆದಿದ್ದಾರೆ. ಮೊದಲಿಗೆ ಪೊಲೀಸರು ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಿರುವುದು ಕಂಡು ಬಂದಿತು. ಆದರೆ ಮನೆಯೊಳಗೆ ಯುವತಿ ಧ್ವನಿಯನ್ನು ಕೇಳಿಸಿಕೊಂಡ ಪೊಲೀಸರು, ಬಾಗಿಲನ್ನು ತಟ್ಟಿದ್ದಾರೆ. ಆದರೆ ಬಾಗಿಲು ತೆರೆಯಲು ಅಂಕಿತಾ ತಕರಾರು ಮಾಡಿದಾಗ, ಬೇರೆ ದಾರಿ ಕಾಣದೇ ಪೊಲೀಸರು ಬಡಗಿಯನ್ನು ಕರೆಸಿ ಬಾಗಿಲು ಒಡೆದು ಮನೆಯೊಳಗೆ ನುಗ್ಗಿದ್ದಾರೆ. ಈ ವೇಳೆ ಒಂದು ಕೋಣೆಯಲ್ಲಿ ಅಂಕಿತಾ ಮತ್ತೊಂದು ಕೋಣೆಯಲ್ಲಿ ಆಕೆಯ ತಾಯಿ ಬಿದ್ದಿರುವುದನ್ನು ನೋಡಿದ್ದಾರೆ. ಅಲ್ಲದೇ ಅಂಕಿತಾ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ತಿಳಿದುಬಂದಿದೆ.

ಇದೀಗ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಾಲೆ ಇಲ್ಲದೇ 2 ವರ್ಷದಿಂದ ಮನೆ-ಮನೆ ಅಲೆಯುತ್ತಿರುವ ಶಿಕ್ಷಕರು, ಮಕ್ಕಳು

ಸದ್ಯ ಮಹಿಳೆ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಎಚ್‍ಎಎಲ್‍ನ ನಿವೃತ್ತ ಇಂಜಿನಿಯರ್ ಸುನೀತಾ 10 ವರ್ಷಗಳ ಹಿಂದೆ ಪತಿ ರಜನೀಶ್ ದೀಕ್ಷಿತ್‍ಗೆ ವಿಚ್ಛೇದನ ನೀಡಿದ್ದರು. ನಂತರ ಕ್ಯಾನ್ಸರ್ ಸಮಸ್ಯೆಯಿಂದ ಹೋರಾಡುತ್ತಿದ್ದಳು ಮತ್ತು ತನ್ನ 26 ವರ್ಷದ ಮಗಳ ಸಹಾಯದಿಂದ.

Comments

Leave a Reply

Your email address will not be published. Required fields are marked *