ಮಹಾರಾಷ್ಟ್ರದ ಯುವತಿ, ಧಾರವಾಡ ಯುವಕನ 4 ವರ್ಷದ ಪ್ರೀತಿ – ಈಗ ದಾಂಪತ್ಯ ಜೀವನ

ಧಾರವಾಡ: ಮನೆಯವರ ವಿರೋಧ ನಡುವೆಯೂ ಪ್ರೇಮಿಗಳಿಬ್ಬರು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಜಿಲ್ಲೆಯ ಸುಳ್ಯ ಗ್ರಾಮದ ಯುವಕ ಬಸವರಾಜ್ ದೇಸಾಯಿ (27) ಹಾಗೂ ಮಹಾರಾಷ್ಟ್ರ ಮೂಲದ ಮೋನಿಕಾ ತುಳವೆ (24) ಪ್ರೇಮಿಗಳಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧಾರವಾಡದ ದುರ್ಗಾದೇವಿ ದೇವಸ್ಥಾನದಲ್ಲಿ ದಲಿತ ಪರ ಸಂಘಟನೆ ನೇತೃತ್ವದಲ್ಲಿ ಈ ಮದುವೆ ನೆರವೇರಿದೆ.

ಇವರಿಬ್ಬರು ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಪ್ರೀತಿ ವಿಚಾರವನ್ನು ಮನೆಯವರ ಮುಂದೆ ಯುವತಿ ಪ್ರಸ್ತಾಪಿಸಿದ್ದರು. ಆದ್ರೆ ಆಕೆಯ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಇದರಿಂದ ಯುವತಿ ಯುವಕವನೊಂದಿಗೆ ಮದುವೆ ಮಾಡಿಕೊಳ್ಳಲು ಮನೆ ಬಿಟ್ಟು ಧಾರವಾಡಕ್ಕೆ ಬಂದಿದ್ದಾರೆ. ಯುವಕ ಮತ್ತು ಯುವತಿ ಬೇರೆ ಜಾತಿಯಾಗಿದ್ದರಿಂದ ಅವರ ಕುಟುಂಬದವರು ಮದುವೆಗೆ ನಿರಾಕರಿಸಿದ್ದರು. ಆದ್ದರಿಂದ ಇಬ್ಬರು ಮನೆಬಿಟ್ಟು ಬಂದು ಮದುವೆಯಾಗಿದ್ದಾರೆ.

ಸದ್ಯ ಮೋನಿಕಾ ಪುಣೆಯಲ್ಲಿ ಎಂಎಸ್‍ಡಬ್ಲು ಮಾಡಿಕೊಂಡಿದ್ದಾರೆ. ಬಸವರಾಜ್ ನೆಟ್ ವರ್ಕಿಂಗ್ ಕೆಲಸ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *