ಬೆಂಗಳೂರು: ಪ್ರಿಯಕರ ಮಾಡಿದ ಚಾಲೆಂಜ್‍ಗೆ ಪ್ರೇಯಸಿಯೊಬ್ಬಳು ವಿಷ ಕುಡಿದು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತ್ತಿಗನೂರು ಗ್ರಾಮದಲ್ಲಿ ನಡೆದಿದೆ.
ಹರೀಶ್(20) ಚಾಲೆಂಜ್ ಮಾಡಿದ ಪ್ರಿಯಕರನಾಗಿದ್ದು, ದಿವ್ಯ (19) ಸಾವನ್ನಪ್ಪಿದ್ದ ಪ್ರೇಯಸಿ. ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಿಯಕರ ಹರೀಶ್ ಮತ್ತು ದಿವ್ಯ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಒಂದು ದಿನ ಇಬ್ಬರು ಭೇಟಿಯಾಗಿದ್ದು, ಈ ವೇಳೆ ನನ್ನ ಮೇಲೆ ನಿನಗೆ ನಿಜವಾದ ಪ್ರೀತಿ ಇದ್ದರೆ ವಿಷ ಕುಡಿ ಎಂದು ಹರೀಶ್ ಚಾಲೆಂಜ್ ಮಾಡಿದ್ದಾನೆ. ದಿವ್ಯ ಪ್ರಿಯಕರನ ಮಾತನ್ನು ನಂಬಿ ವಿಷ ಕುಡಿದ್ದಾಳೆ. ಬಳಿಕ ಮನೆಗೆ ತೆರಳಿದ್ದಾಳೆ.

ಮನೆಗೆ ಹೋದ ಬಳಿಕ ದಿವ್ಯ ವಾಂತಿ ಮಾಡಲು ಶುರು ಮಾಡಿದ್ದಾಳೆ. ತಕ್ಷಣ ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಒಂದು ದಿನದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ದಿವ್ಯ ಮೃತಪಟ್ಟಿದ್ದಾಳೆ.
ಸದ್ಯಕ್ಕೆ ಪ್ರಿಯಕರ ಹರೀಶ್ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಿವ್ಯ ಸಾವನ್ನಪ್ಪಿದ ವಿಷಯ ತಿಳಿದು ಇತ್ತ ಆರೋಪಿ ಹರೀಶ್ ಪರಾರಿಯಾಗಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply