ಮನೆಯವ್ರಿಗೆ ಹೆದರಿ ತುಮಕೂರಿಂದ ನೆಲಮಂಗಲಕ್ಕೆ ಬಂದ ಜೋಡಿ- ರಕ್ಷಣೆಗಾಗಿ ಮನವಿ

ಬೆಂಗಳೂರು: ಪ್ರೇಮಿಗಳ ಪ್ರೀತಿಗೆ ಜಾತಿ ಅಡ್ಡ ಬಂದ ಪರಿಣಾಮ, ಯುವ ಜೋಡಿಗಳು ರಾತ್ರೋರಾತ್ರಿ ಮನೆ ಬಿಟ್ಟು ಓಡಿ ಬಂದಿದ್ದಾರೆ.

1 ವರ್ಷದಿಂದ ಪ್ರೀತಿಸುತ್ತಿದ್ದ ತುಮಕೂರು ಮೂಲದ ಯುವ ಜೋಡಿ, ಮನೆಯವರಿಗೆ ಹೆದರಿ ಬೆಂಗಳೂರು ಹೊರವಲಯ ನೆಲಮಂಗಲಕ್ಕೆ ಬಂದಿದ್ದಾರೆ. ಮಂಜುಕಿರಣ್ ಹಾಗೂ ತೃಪ್ತಿ(ಹೆಸರು ಬದಲಾಯಿಸಲಾಗಿದೆ) ಮನೆಯವರಿಗೆ ಹೆದರಿದ ಜೋಡಿಯಾಗಿದೆ. ಇಬ್ಬರದ್ದು ಬೇರೆ ಬೇರೆ ಜಾತಿಯಾಗಿದ್ದರಿಂದ ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇವರಿಬ್ಬರ ಪ್ರೀತಿಯ ವಿಚಾರ ಯುವತಿಯ ಮನೆಯವರಿಗೆ ತಿಳಿಯುತ್ತಿದ್ದಂತೆ, ಆಕೆಯ ಮನೆಯವರು ಅಡ್ಡಿಪಡಿಸಿದ್ದಾರೆ. ಹಾಗಾಗಿ ಕಳೆದ 2 ದಿನದ ಹಿಂದೆ ತುಮಕೂರಿನ ಗೂಳೂರು ಗಣಪತಿ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಮದುವೆಯ ನಂತರ ಯುವತಿಯ ಮನೆಗೆ ವಿಚಾರ ತಿಳಿದು, ತುಮಕೂರಿನ ಎನ್.ಇ.ಪಿ.ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ಭಯಭೀತರಾಗಿದ್ದ ಜೋಡಿ ನೆಲಮಂಗಲಕ್ಕೆ ಬಂದು, ಸಂಬಂಧಿಯ ಮನೆಯಲ್ಲಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದೆ.

ಈ ಬಗ್ಗೆ ಯುವತಿ ಮಾಧ್ಯಮದ ಜೊತೆ ಮಾತನಾಡಿ, ನಾವಿಬ್ಬರೂ ಒಬ್ಬರನೊಬ್ಬರು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದೇವೆ. ಹೀಗಾಗಿ ಇಷ್ಟಪಟ್ಟೇ ಮದುವೆಯಾಗಿದ್ದೇವೆ. ಆದ್ರೆ ನಮ್ಮ ಮನೆಯವರ ನಮ್ಮ ಪ್ರೀತಿಯನ್ನು ವಿರೋಧಿಸಿದ್ದಾರೆ. ಅಲ್ಲದೇ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ ಅಂತ ಹೇಳಿದ್ದಾಳೆ.

ನಮಗೆ ಯುವತಿ ಮನೆ ಕಡೆಯಿಂದ ಸಮಸ್ಯೆಯಾಗಿದೆ. ನಾವಿಬ್ಬರೂ ಪ್ರೀತಿಸಿದ ವಿಚಾರ ಹುಡುಗಿ ಮನೆಯವರಿಗೆ ಗಮನಕ್ಕೆ ಬಂದ ಬಳಿಕ ಬೇರೆ ಬೇರೆ ಜಾತಿ ಅಂತ ಒಪ್ಪಿಲ್ಲ. ಸದ್ಯ ಅವರು ನಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ. ಹೀಗಾಗಿ ನಮಗೆ ರಕ್ಷಣೆ ಬೇಕು ಅಂತ ಯುವಕ ಮನವಿ ಮಾಡಿಕೊಂಡಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *