ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನ ಕೂರಿಸಿಕೊಂಡು ರೈಡಿಂಗ್- ಬೈಕಿನಲ್ಲೇ ಮುತ್ತಿನ ಸುರಿಮಳೆ

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿ ತಾಣ ಜಿಲ್ಲೆಯ ನಂದಿಗಿರಿಧಾಮದ ರಸ್ತೆಯಲ್ಲಿ ಅಂಕು ಡೊಂಕಿನ ರಸ್ತೆಯಲ್ಲಿ ಬೈಕಿನ ಹಿಂಬದಿ ಸೀಟಿನಲ್ಲಿ ಕೂತು ಸಾಗಬೇಕಾದ ಯುವತಿಯೊಬ್ಬಳು ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂತು ಸಾಗಿದ್ದಾಳೆ.

ಪ್ರೇಮಿಗಳಿಬ್ಬರು ನಂದಿಗಿರಿಧಾಮದ ರಸ್ತೆಯಲ್ಲಿ ಅಸಭ್ಯವಾಗಿ ಬೈಕ್ ಚಲಾಯಿಸಿರುವ ವಿಡಿಯೋವೊಂದು ಲಭ್ಯವಾಗಿದೆ. ತನ್ನ ಪ್ರೇಮಿಯನ್ನು ಬೈಕಿನ ಟ್ಯಾಂಕ್ ಮೇಲೆ ಕೂರಿಸಿಕೊಂಡು ಪ್ರಿಯಕರ ಬೈಕ್ ಓಡಿಸಿದ್ದಾನೆ. ಪ್ರೇಮಿಗಳ ಜಾಲಿ ರೈಡನ್ನು ಅವರ ಹಿಂದೆ ಬರುತ್ತಿದ್ದ ಸವಾರರು ವಿಡಿಯೋ ಮಾಡಿದ್ದಾರೆ.

ಯುವತಿಯೊಬ್ಬಳು ತನ್ನ ಪ್ರಿಯಕರನ್ನ ತನ್ನ ತೋಳಲ್ಲಿ ಬಂಧಿ ಮಾಡಿಕೊಂಡು ಬೈಕಿನ ಟ್ಯಾಂಕ್ ಮೇಲೆ ಕುಳಿತು ಹೋಗಿದ್ದಾಳೆ. ಇತ್ತ ಬೈಕ್ ರೈಡ್ ಮಾಡುತ್ತಿದ್ದ ಪ್ರಿಯಕರ ಲೋಕದ ಪರಿವೇ ಇಲ್ಲದಂತೆ ಬೈಕ್ ರೈಡ್ ಮಾಡುತ್ತಿದ್ದನು. ಅಸಲಿಗೆ ಕಾನೂನನ್ನ ಗಾಳಿಗೆ ತೂರಿ ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಜೋಡಿಯ ಹುಚ್ಚಾಟ ಇತರೆ ಪ್ರವಾಸಿಗರಿಗೆ ಇರುಸು ಮುರುಸು ಉಂಟುಮಾಡಿತ್ತು ಎಂದು ಪ್ರವಾಸಿಗ ಚಿಕ್ಕ ಅಂಜಿನಪ್ಪ ಹೇಳಿದ್ದಾರೆ.

ಪ್ರೇಮಿಗಳ ಪಾಲಿನ ಸ್ವರ್ಗ ತಾಣದಲ್ಲಿ ವಿಹರಿಸಿ ಬಂದಿದ್ದ ಈ ಜೋಡಿ ಇಡೀ ಲೋಕದ ಪರಿವೆಯನ್ನ ಮರೆತಿದ್ದರು. ಬೈಕಿನ ಮುಂಭಾಗದ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ತನ್ನ ಪ್ರಿಯಕರನ್ನ ಬಿಗಿದಪ್ಪಿಕೊಂಡಿದ್ದು, ತನ್ನ ಪ್ರಿಯತಮೆಯ ತೋಳಲ್ಲಿ ಬಂಧಿಯಾಗಿದ್ದ ಆ ಯುವಕ ಜಾಂ ಜೂಮ್ ಅಂತ ಬೈಕ್ ರೈಡ್ ಮಾಡುತ್ತಿದ್ದನು. ನಡುರಸ್ತೆಯಲ್ಲಿ ಯಾರಿಗೂ ಡೋಂಟ್ ಕೇರ್ ಎಂಬಂತೆ ಬೈಕಿನಲ್ಲಿ ಸಾಗುತ್ತಿದ್ದ ಈ ಜೋಡಿಯ ಹುಚ್ಚಾಟ ಇತರೆ ವಾಹನ ಸವಾರರಿಗೆ ಮುಜುಗರವನ್ನುಂಟು ಮಾಡಿತ್ತು. ಇದು ಇದೊಂದು ಜೋಡಿಯ ಕಥೆ ಅಲ್ಲ ಬಹುತೇಕರದ್ದು ಇದೆ ತರ ಅಂತ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ನಂದಿಗಿರಿಧಾಮ ಹೇಳಿ ಕೇಳಿ ಪ್ರೇಮಿಗಳ ಪಾಲಿನ ಅಚ್ಚು ಮೆಚ್ಚಿನ ತಾಣವಾಗಿದೆ. ಆದರೆ ಪ್ರೇಮದ ಹೆಸರಲ್ಲಿ ನಡುರಸ್ತೆಯಲ್ಲೇ ಯಾರಿಗೂ ಡೋಂಟ್ ಕೇರ್ ಮಾಡದ ಜೋಡಿ ಹಕ್ಕಿಗಳು ಸಭ್ಯತೆಯ ಎಲ್ಲೆಯನ್ನೇ ಮೀರಿ ನಡೆದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *