ಲಾಂಗ್ ಡ್ರೈವ್ ಹೋಗಲು ಹಣಕ್ಕಾಗಿ ಕಳ್ಳತನಕ್ಕಿಳಿದಿದ್ದ ಲವ್ವರ್ಸ್ ಅರೆಸ್ಟ್

– ಬಾಡಿಗೆ ನೆಪದಲ್ಲಿ ಮನೆಗೆ ಹೋಗಿ ಸಿಕ್ಕಿದ್ದು ಕಳವು

ಬೆಂಗಳೂರು: ಲಾಂಗ್ ಡ್ರೈವ್ ಹೋಗಲು ಹಣವಿಲ್ಲ ಎಂದು ಕಳ್ಳತನಕ್ಕೆ ಇಳಿದ ಜೋಡಿಯೊಂದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ವಿನಯ್ ಹಾಗೂ ಕೀರ್ತನಾ ಎಂದು ಗುರುತಿಸಲಾಗಿದ್ದು, ಇವರನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಲಾಕ್ ಮಾಡಿದ್ದಾರೆ.

ವಿನಯ್ ರಾಜಾಜಿನಗರದ ರೌಡಿಶೀಟರ್ ಆಗಿದ್ದು, ಈತ ಕೀರ್ತನಾಳನ್ನು ಲವ್ ಮಾಡುತ್ತಿದ್ದ. ಅಂತೆಯೇ ಕೀರ್ತನಾ ತನ್ನ ಪ್ರಿಯಕರನ ಬಳಿ ಲಾಂಗ್ ಡ್ರೈವ್ ಹಾಗೂ ಗೋಲ್ಡ್ ಗಿಫ್ಟ್ ಬೇಡಿಕೆಯಿಟ್ಟಿದ್ದಾಳೆ. ಆಗ ವಿನಯ್, ನಾನೇ ಕಳ್ಳ. ನಿನಗೇನೆ ಗಿಫ್ಟ್ ಕೊಡಿಸ್ಲಿ. ನಾನೊಬ್ಬ ರೌಡಿಶೀಟರ್ ಅಂತ ಕೀರ್ತನಾಳನ್ನ ಕಿಚಾಯಿಸುತ್ತಿದ್ದ. ಇತ್ತ ನೀನ್ ರೌಡಿ ಆದರೂ ನಿನ್ನನ್ನು ಲವ್ ಮಾಡಿದ್ದೀನಿ. ನಿನ್ನ ಜೊತೆ ಜೈಲಿಗೆ ಬರೋದಕ್ಕೂ ನಾನು ರೆಡಿ ಇದ್ದೀನಿ ಅಂತ ಕೀರ್ತನಾ, ವಿನಯ್ ಬಳಿ ಹೇಳಿದ್ದಳು. ಅದರಂತೆ ಲವ್ವರ್ ರೌಡಿಶೀಟರ್ ವಿನಯ್ ಜೊತೆ ಕಳ್ಳತನಕ್ಕೆ ಕೀರ್ತನಾ ಕೂಡ ಕೈ ಜೋಡಿಸಿದ್ದಾಳೆ. ಗಂಡ-ಹೆಂಡತಿಯಂತೆ ಬಾಡಿಗೆ ಮನೆ ಕೇಳಲು ಹೋಗುವ ನೆಪದಲ್ಲಿ ಈ ಖರ್ತನಾಕ್ ಲವ್ವರ್ಸ್ ಮನೆಗಳವು ಮಾಡ್ತಿದ್ದರು.

ಮಾರುತಿ ನಗರದ ಕುಲಶೇಖರ್ ಎಂಬವರ ಮನೆಗೆ ಬಾಡಿಗೆಗೆ ಕೇಳುವ ನೆಪದಲ್ಲಿ ಹೋಗಿ ಕಳ್ಳತನ ಮಾಡಿದ್ದಾರೆ. ಮನೆ ಮಾಲೀಕನ ಮನೆಯಲ್ಲಿ ಬಾಡಿಗೆ ಮಾತಾಡುವ ನೆಪದಲ್ಲಿ ವಿನಯ್ ಮಾತಿಗಿಳಿತಿದ್ದ. ಈ ವೇಳೆ ಮಾಲೀಕರ ಮನೆ ತುಂಬಾ ಚೆನ್ನಾಗಿದೆ ಅಂತ ಮನೆ ನೋಡಲು ಕೀರ್ತನಾ ಮುಂದಾಗುತ್ತಿದ್ದಳು. ವಿನಯ್ ಮಾತಾಡಿಸುತ್ತಾ ಮೈಂಡ್ ಡೈವರ್ಟ್ ಮಾಡ್ತಿದ್ರೆ, ಇತ್ತ ಕೈಗೆ ಸಿಕ್ಕ ವಸ್ತುಗಳನ್ನ ಕೀರ್ತನಾ ಎಗರಿಸ್ತಿದ್ದಳು. ಇದನ್ನೂ ಓದಿ: ಕೆರೆ ನೋಡಲು ಬಂದವರಿಗೆ ಕೊರೊನಾ ವ್ಯಾಕ್ಸಿನ್

ಕಳೆದ ಅಕ್ಟೋಬರ್ 4 ರಂದು ಕುಲಶೇಖರ್ ಮನೆಯಲ್ಲಿ 1 ಮೊಬೈಲ್ 1 ಲ್ಯಾಪ್ ಟಾಪ್ ಹಾಗೂ 15 ಸಾವಿರ ಹಣ ಎಗರಿಸಿದ್ರು. ಸದ್ಯ ಮನೆ ಮಾಲೀಕ ಕುಲಶೇಖರ್ ಕೊಟ್ಟ ದೂರಿನನ್ವಯ ಕಳ್ಳ ಲವ್ವರ್ಸ್ ಅರೆಸ್ಟ್ ಆಗಿದ್ದಾರೆ. ಸದ್ಯ ರೌಡಿ ಲವ್ವರ್ ಜೊತೆ ಕಳ್ಳತನಕ್ಕೆ ಹೋಗಿ ಪ್ರಿಯತಮೆ ಕೀರ್ತನಾ ಕೂಡ ಜೈಲು ಪಾಲಾಗಿದ್ದಾಳೆ.

Comments

Leave a Reply

Your email address will not be published. Required fields are marked *