ಮಾಲ್ ನಲ್ಲೇ ಪ್ರಿಯತಮೆಯನ್ನು ಎಳೆದು ಚೂರಿ ಇರಿದ ಭಗ್ನ ಪ್ರೇಮಿ!

ನೊಯ್ಡಾ: 18 ವರ್ಷದ ಯುವತಿಯನ್ನು ಭಗ್ನ ಪ್ರೇಮಿಯೊಬ್ಬ ಮಾಲ್ ನಲ್ಲೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ಶುಕ್ರವಾರ ನಡೆದಿದೆ.

ಆರೋಪಿಯನ್ನು ಕುಲ್ ದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಪ್ರಿಯತಮೆಯನ್ನು ಕೊಲೆಗೈದ ಬಳಿಕ ಈತನೂ ಚೂರಿ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಥಿತಿ ಚಿಂತಾನಕವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ಕುಲ್ ದೀಪ್ ನಗರದಲ್ಲಿರೋ ಮಾಲ್ ಗೆ ಬಂದಿದ್ದಾರೆ. ಯವತಿಯೂ ಅದೇ ಮಾಲ್ ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸ್ವಲ್ಪ ಸಮಯದ ಬಳಿಕ ಯುವತಿ ಪ್ರಥಮ ಮಹಡಿಯಲ್ಲಿರೋ ಶೌಚಾಲಯದ ಕಡೆ ತೆರಳುತ್ತಿದ್ದಳು. ಈ ವೇಳೆ ಆರೋಪಿ ಆಕೆಯನ್ನು ಎಳೆದಾಡಿ ಹಲವು ಬಾರಿ ಆಕೆಗೆ ಚೂರಿಯಿಂದ ಇರಿದಿದ್ದಾನೆ ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಯುವತಿಯನ್ನು ಕೊಲೆಗೈದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪೊಲೀಸರನ್ನು ನೋಡುತ್ತಿದ್ದಂತೆಯೇ ತನಗೆ ತಾನೇ ಚೂರಿಯಿಂದ ಇರಿದುಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಕಸ್ನಾ ಪೊಲೀಸ್ ಠಾಣೆಯ ಶಾಲೆಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಆರೋಪಿ ಆಕೆಯನ್ನು ಹಿಂಬಾಲಿಸುತ್ತಿದ್ದನು. ಈ ಹಿನ್ನೆಲೆಯಲ್ಲಿ ಪೋಷಕರು ಆಕೆಗೆ ಓಡಾಡಲು ಆಟೋ ರಿಕ್ಷಾದ ವ್ಯವಸ್ಥೆ ಮಾಡಿದ್ದರು. ಈಕೆ ತನ್ನ ಕುಟುಂಬದೊಂದಿಗೆ ದಾದ್ರಿ ಎಂಬಲ್ಲಿ ನೆಲೆಸಿದ್ದರು.

ದಾದ್ರಿಯ ಗೌತಮ್ ಪುರಿ ನಿವಾಸಿಯಾಗಿರೋ ಕುಲ್ ದೀಪ್ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ.

Comments

Leave a Reply

Your email address will not be published. Required fields are marked *