ಆತ್ಮಹತ್ಯೆಗೆ ಶರಣಾಗಿ ಪ್ರೀತಿ ನಿರೂಪಿಸೆಂದ – ನಿರಾಕರಿಸಿದ ಪ್ರೇಯಸಿಯ ಕತ್ತು ಸೀಳಿದ

– ಪ್ರೇಯಸಿ ಕತ್ತು ಸೀಳಿ ತಾನೂ ವಿಷಕುಡಿದ
– ಕೊನೆಗೆ ತಪ್ಪೊಪ್ಪಿಕೊಂಡು ಪೊಲೀಸರ ಮುಂದೆ ಜೀವಬಿಟ್ಟ

ಲಕ್ನೋ: ನನ್ನೊಂದಿಗೆ ಆತ್ಮಹತ್ಯೆಗೆ ಶರಣಾಗಿ ನಿನ್ನ ಪ್ರೀತಿ ನಿರೂಪಿಸು ಎಂದು ಪಾಗಲ್ ಪ್ರೇಮಿಯೋರ್ವ ತನ್ನ ಪ್ರೇಯಸಿಗೆ ಹೇಳಿದಾಗ ಆಕೆ ನಿರಾಕರಿಸಿದ್ದಕ್ಕೆ ಕೊಲೆ ಮಾಡಿ, ಕೊನೆಗೆ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಖಾಕೇಗಢದಲ್ಲಿ ನಡೆದಿದೆ.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಛಿಚ್ಚವಾಲಿ ಗ್ರಾಮದ ನಿವಾಸಿ ಹೇತ್ ಸಿಂಗ್ ಥೋಮರ್(21) ತನ್ನ 19 ವರ್ಷದ ಪ್ರೇಯಸಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನವೆಂಬರ್ 30ರಂದು ಯುವಕ ತನ್ನ ಪ್ರೇಯಸಿಯನ್ನು ಕತ್ತು ಸೀಳಿ ಕೊಲೆಗೈದು ತಲೆಮರಿಸಿಕೊಂಡಿದ್ದನು. ಆದರೆ ಸೋಮವಾರ ಆಗ್ರಾಕ್ಕೆ ವಾಪಸ್ ಬಂದ ಯುವಕ ಕ್ರಿಮಿನಾಶಕವನ್ನು ನೀರಿನಲ್ಲಿ ಬೆರೆಸಿ ಸೇವಿಸಿ, ಖಾಕೇಗಢ ಪೊಲೀಸ್ ಠಾಣೆಗೆ ಬಂದು ತಾನೇ ಪ್ರೇಯಸಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬೇರೆ ವ್ಯಕ್ತಿ ಜೊತೆ ಮಾತನಾಡಿದ್ದಕ್ಕೆ ಪ್ರಿಯಕರನಿಂದ ಕಪಾಳಮೋಕ್ಷ- ಯುವತಿ ಸಾವು

ಅಲ್ಲದೆ ತಾನೂ ವಿಷ ಸೇವಿಸಿದ್ದೇನೆ ಎಂದು ಪೊಲೀಸರ ಬಳಿ ಹೇಳಿದಾಗ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಯುವಕ ಸಾವನ್ನಪ್ಪಿದ್ದಾನೆ. ಠಾಣೆಗೆ ಬಂದ ಯುವಕ ಮೊದಲು ತಾನು ಯಾಕೆ ಪ್ರೇಯಸಿಯನ್ನು ಕೊಲೆ ಮಾಡಿದೆ? ಹೇಗೆ ಕೊಲೆ ಮಾಡಿದೆ? ನಡೆದಿದ್ದೇನು ಎಂಬ ಎಲ್ಲಾ ವಿಚಾರವನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಇದನ್ನು ಪೊಲೀಸರು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಸತ್ಯಾಂಶವನ್ನು ಹೇಳಿದ ಬಳಿಕ ಕೊನೆಯಲ್ಲಿ ನಾನು ಕೂಡ ವಿಷ ತೆಗೆದುಕೊಂಡಿದ್ದೇನೆ ಎಂದಿದ್ದಾನೆ.

ಯುವತಿ ಖಾಕೇಗಢ ನಿವಾಸಿಯಾಗಿದ್ದು, ಆಕೆಯ ಪಕ್ಕದ ಮನೆಯ ಯುವಕನೊಂದಿಗೆ ಥೋಮರ್ ಸಹೋದರಿ ವಿವಾಹವಾಗಿತ್ತು. ಆಗ ಥೋಮರ್ ಗೆ ಯುವತಿ ಪರಿಚಯವಾಗಿತ್ತು. ಬಳಿಕ ಅವರಿಬ್ಬರು ಪ್ರೀತಿಸಲು ಆರಂಭಿಸಿದ್ದರು. ಮೊದಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಯುವತಿಗೆ ತನ್ನ ಊರಿನ ಮತ್ತೊಬ್ಬ ಯುವಕನ ಪರಿಚಯವಾಗಿತ್ತು. ಆತನೊಂದಿಗೆ ಯುವತಿ ಚೆನ್ನಾಗಿ ಮಾತನಾಡಿಕೊಂಡಿದ್ದಳು. ಇದು ಥೋಮರ್ ಕೋಪಕ್ಕೆ ಕಾರಣವಾಗಿದ್ದು, ನ.30ರಂದು ತನ್ನ ಪ್ರೇಯಸಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಜಗಳವಾಡಿದ್ದನು. ಇದನ್ನೂ ಓದಿ: ಪ್ರೇಯಸಿಗೆ ಚಾಕು ಇರಿದ – ತಾನೂ ಇರಿದ್ಕೊಂಡು, ಆಕೆಯ ಮೇಲೆಯೇ ಬಿದ್ದ

ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ನನ್ನೊಡನೆ ಆತ್ಮಹತ್ಯೆ ಮಾಡಿಕೋ, ಆಗ ನಿನ್ನ ಪ್ರೀತಿ ನಿಜ ಎಂದು ಸಾಬೀತಾಗುತ್ತೆ ಎಂದು ಥೋಮರ್ ಹೇಳಿದನು. ಆದರೆ ಪ್ರೇಮಿಯ ಹುಚ್ಚು ನಿರ್ಧಾರಕ್ಕೆ ಯುವತಿ ಒಪ್ಪಿರಲಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಥೋಮರ್ ಹಿಂದೆ ಮುಂದೆ ಯೋಚಿಸದೆ ಚಾಕುವಿನಿಂದ ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿದ್ದ. ನಂತರ ಅಲ್ಲಿಂದ ಪರಾರಿಯಾಗಿ ತಲೆಮರಿಸಿಕೊಂಡಿದ್ದನು. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಯುವತಿಗೆ ಭಗ್ನ ಪ್ರೇಮಿಯಿಂದ ಚಾಕು ಇರಿತ

ಎರಡು ದಿನಗಳ ಬಳಿಕ ಆತನಿಗೆ ಏನಾಯಿತೋ ಗೊತ್ತಿಲ್ಲ. ಆತನೇ ಖಾಕೇಗಢ ಪೊಲೀಸ್ ಠಾಣೆಗೆ ಬಂದು ಶರಣಾಗಿ, ತಪ್ಪೊಪ್ಪಿಕೊಂಡಿದ್ದ. ಆದರೆ ಠಾಣೆಗೆ ಬರುವ ಮುನ್ನವೇ ಥೋಮರ್ ತನ್ನ ನೀರಿನ ಬಾಟಲಿಯಲ್ಲಿ ಕ್ರಿಮಿನಾಶ ಬೆರೆಸಿ ಕುಡಿದಿದ್ದನು. ಪೊಲೀಸರ ಮುಂದೆ ನಡೆದಿದ್ದ ವಿಷಯವನ್ನೆಲ್ಲಾ ಹೇಳಿ ಕೊನೆಗೆ ಜೀವಬಿಟ್ಟಿದ್ದಾನೆ.

ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವಕ ಠಾಣೆಗೆ ಬಂದ ಸಮಯದಲ್ಲಿ ಆತನೊಂದಿಗೆ ಯಾರಾದರು ಬಂದಿದ್ದರಾ ಎಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *