ಗೆಳೆಯನೊಂದಿಗೆ ಬೆಡ್‍ರೂಮಿನಲ್ಲಿದ್ದ ಅಪ್ರಾಪ್ತೆ – ತಾಯಿ ಬರ್ತಿದ್ದಂತೆ ಕಿಟಿಕಿಯಿಂದ ಜಂಪ್

– ಕಾಲು ಮುರಿದುಕೊಂಡ 17ರ ಹುಡುಗಿ

ಮುಂಬೈ: ಅಪ್ರಾಪ್ತೆ ಹುಡುಗಿಯೊಬ್ಬಳು ತನ್ನ ತಾಯಿ ಬರುತ್ತಿರುವುದನ್ನು ನೋಡಿ ಮೊದಲ ಮಹಡಿಯ ಫ್ಲಾಟ್‍ನಿಂದ ಹಾರಿರುವ ಘಟನೆ ನಗರದ ಕುರ್ಲಾದಲ್ಲಿ ನಡೆದಿದೆ.

ಈ ಘಟನೆ ಉಪನಗರ ಬೈಲ್ ಬಜಾರ್ ಪ್ರದೇಶದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 17 ವರ್ಷದ ಹುಡುಗಿ ಗೆಳೆಯನೊಂದಿಗೆ ತನ್ನ ಬೆಡ್‍ರೂಮಿನಲ್ಲಿದ್ದಳು. ಆದರೆ ಸ್ವಲ್ಪ ಸಮಯದ ನಂತರ ಆಕೆಯ ತಾಯಿ ಮನೆಗೆ ಬಂದಿದ್ದಾರೆ. ಇದನ್ನು ಗಮನಿಸಿದ ಹುಡುಗಿ ಭಯಗೊಂಡು ತನ್ನ ಗೆಳೆಯನನ್ನು ಓಡಿಹೋಗುವಂತೆ ಕೇಳಿಕೊಂಡಿದ್ದಾಳೆ.

ಕೊನೆಗೆ ತಾನೇ ಫ್ಲಾಟ್‍ನ ಕಿಟಕಿಯಿಂದ ಹೊರಗೆ ಹಾರಿದ್ದಾಳೆ. ಈ ವೇಳೆ ಹುಡುಗಿಯ ಎಡಗಾಲು ಮುರಿದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಗೆಳೆಯ ಸುನಿಲ್ ಝೇಂಡೆ (20). ಈತ ನನ್ನ ಜೊತೆ ಬೆಡ್‍ರೂಮಿನಲ್ಲಿದ್ದನು. ತಾಯಿ ಬರುತ್ತಿದ್ದಾರೆ ಎಂದು ತಿಳಿದು ಭಯಗೊಂಡು ಕಿಟಕಿಯಿಂದ ಹಾರಿದೆ ಎಂದು ಹುಡುಗಿ ಒಪ್ಪಿಕೊಂಡಿದ್ದಾಳೆ.

ಬಾಲಕಿಯ ಕುಟುಂಬವರು ಈ ಕುರಿತು ದೂರು ದಾಖಲಿಸಿದ್ದಾರೆ. ಹೀಗಾಗಿ ನಾವು ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಗೆಳೆಗ ಸುನಿಲ್‍ನನ್ನು ಬಂಧಿಸಿದ್ದೇವೆ ಎಂದು ವಿಬಿ ನಗರ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *