ಸುಳ್ಳು ಹೇಳಿ ಲಾಡ್ಜ್‌ಗೆ ಕರೆಸಿಕೊಂಡ 23ರ ತರುಣ- ರಾತ್ರಿಯಿಡೀ ಮಾಜಿ ಪ್ರೇಯಸಿ ಮೇಲೆ ರೇಪ್

ಮುಂಬೈ: 23 ವರ್ಷದ ಯುವಕ ತನ್ನ ಮಾಜಿ ಪ್ರೇಯಸಿಯನ್ನು ಲಾಡ್ಜ್‌ನಲ್ಲಿ ಕೂಡಿ ಹಾಕಿಕೊಂಡು ರಾತ್ರಿಯಿಡೀ ಅತ್ಯಾಚಾರ ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಬೋಯ್ಸಿರ್ ನಲ್ಲಿ ನಡೆದಿದೆ.

ಈ ಘಟನೆ ಫೆಬ್ರವರಿ 10-11ರ ಮಧ್ಯರಾತ್ರಿ ನಡೆದಿದ್ದು, ಆರೋಪಿ ಯುವಕನನ್ನು ಫೈಸಲ್ ಸೈಫಿ ಎಂದು ಗುರುತಿಸಲಾಗಿದೆ. ಈತ 21 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದು, ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಫೈಸಲ್ ಸೈಫಿ ಮತ್ತು ಸಂತ್ರಸ್ತೆ 2017ರಿಂದಲೂ ಇಬ್ಬರೂ ಪ್ರೀತಿಸುತ್ತಿದ್ದರು. ಈ ಹಿಂದೆ ಇಬ್ಬರೂ ಒಟ್ಟಿಗೆ ಇದ್ದ ಸಂದರ್ಭದಲ್ಲಿ ಆರೋಪಿ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದನು. ಬಳಿಕ ಯುವತಿ ಕಾರಣಾಂತರದಿಂದ ಅವನಿಂದ ದೂರ ಆಗಿದ್ದಳು. ಆದರೆ ಆರೋಪಿ ಆ ವಿಡಿಯೋ ಇಟ್ಟುಕೊಂಡು ಸಂತ್ರಸ್ತೆಯನ್ನು ದೈಹಿಕ ಸಂಬಂಧ ಹೊಂದುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ಭಾನುವಾರ ರಾತ್ರಿ ವಿಡಿಯೋ ಕೊಡುವುದಾಗಿ ಹೇಳಿ ಲಾಡ್ಜ್‌ಗೆ ಕರೆಸಿಕೊಂಡಿದ್ದಾನೆ. ಆದರೆ ಅಲ್ಲಿ ಯುವತಿಯನ್ನು ಬಂಧನದಲ್ಲಿಟ್ಟುಕೊಂಡು ಪದೇ ಪದೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೊನೆಗೆ ಸಂತ್ರಸ್ತೆಯನ್ನು ಫೆಬ್ರವರಿ 12 ರಂದು ಬೆಳಗ್ಗೆ ಹೋಗಲು ಅವಕಾಶ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಸೈಫಿ ವಿರುದ್ಧ ದೂರು ಸಂತ್ರಸ್ತೆ ದಾಖಲಿಸಿದ್ದಾಳೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಐಪಿಸಿ ಸೆಕ್ಷನ್ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಿ ಸೈಫಿ ವಿರುದ್ಧ ಪ್ರಕರಣ ದಾಖಲಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *