ಲವ್ ಮಾಡದಿದ್ದರೆ ಕೊಲೆ ಮಾಡ್ತೇನೆ ಎಂದು ಬೆದರಿಸಿದ್ದ ಇಬ್ಬರಿಗೆ 22 ದಿನ ಜೈಲು!

ಚಾಮರಾಜನಗರ: ಲವ್ ಮಾಡದಿದ್ದರೆ ನಿನ್ನ ಅಣ್ಣನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದ ಇಬ್ಬರು ಯುವಕರಿಗೆ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಬಿ.ಎಸ್.ಭಾರತಿ ಪಾಠ ಹೇಳಿ 22 ದಿನ ಜೈಲು ಶಿಕ್ಷೆ ವಿಧಿಸಿದ್ದಾರೆ.

ಚಾಮರಾಜನಗರ ತಾಲೂಕಿನ ಉಡೀಗಾಲ ಗ್ರಾಮದ ಚೇತನ್(23) ಹಾಗೂ ಗುರುಪ್ರಸಾದ್(25) ಶಿಕ್ಷೆಗೊಳಗಾದವರು. 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳನ್ನು ಚೇತನ್ ಪ್ರೀತಿಸು ಎಂದು ಪೀಡಿಸುತ್ತಿದ್ದನಲ್ಲದೇ ಹಿಂಬಾಲಿಸಿ ಚುಡಾಯಿಸುತ್ತಿದ್ದ. ಇವನ ಕಾರ್ಯಕ್ಕೆ ಸ್ನೇಹಿತ ಗುರುಪ್ರಸಾದ್ ಸಾಥ್ ಕೊಡುತ್ತಿದ್ದ. ಇದನ್ನೂ ಓದಿ: ಮಹಿಳೆಯರಿಗಾಗಿ ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್

ಇದೇ ರೀತಿ 2019ರ ಮೇ 8 ರಂದು ಬಾಲಕಿ ಅಜ್ಜಿ ಮನೆಗೆ ತೆರಳಿದ್ದ ವೇಳೆ ಆಕೆಗೆ ಇವರಿಬ್ಬರು ಫೋನಾಯಿಸಿ ಆಸ್ಪತ್ರೆ ಬಳಿ ಈಗ ಬರದಿದ್ದರೆ, ನಿನ್ನಣ್ಣನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಅಂಜಿ ಬಾಲಕಿ ತೆರಳಿದ್ದ ವೇಳೆ, ಆಕೆಗೆ ಚೇತನ್ ಲೈಂಗಿಕವಾಗಿ ಪೀಡಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಕೃತ್ಯಕ್ಕೆ ಗುರುಪ್ರಸಾದ್ ಕೂಡ ಸಾಥ್ ಕೊಟ್ಟಿದ್ದ. ಈ ಸಂಬಂಧ ಬಾಲಕಿ ಪೋಷಕರು ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಇವರಿಬ್ಬರ ವಿರುದ್ಧ ದೂರು ನೀಡಿದ್ದರು. ಇದನ್ನೂ ಓದಿ: ದೇವಸ್ಥಾನ ಕಳ್ಳತನಕ್ಕೆ 7 ಬೀದಿನಾಯಿಗಳನ್ನು ಕೊಂದ ಕಳ್ಳರು

ವಾದ-ಪ್ರತಿವಾದ ಆಲಿಸಿದ ಚಾಮರಾಜನಗರ ನ್ಯಾಯಾಧೀಶರು ಆರೋಪಿಗಳ ಅಪರಾಧ, ಚುಡಾಯಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಮುಂದೆ ಈ ರೀತಿ ಕೃತ್ಯ ಎಸಗಬಾರದು, ಉತ್ತಮ ನಡವಳಿಕೆ ರೂಢಿಸಿಕೊಳ್ಳಬೇಕೆಂದು ಎಚ್ಚರಿಕೆ ಕೊಟ್ಟು 22 ದಿನ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಗೆ ತಪ್ಪಿದಲ್ಲಿ, ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.

Comments

Leave a Reply

Your email address will not be published. Required fields are marked *