ಲವ್ ಜಿಹಾದ್ ಆರೋಪ – ಮಧ್ಯಪ್ರವೇಶ ಮಾಡಲು ನಿರಾಕರಿಸಿದ ಹೈಕೋರ್ಟ್

ತಿರುವನಂತಪುರಂ: ಕೇರಳದಲ್ಲಿ ಸಂಚಲನ ಮೂಡಿಸಿದ್ದ ಜೋಯಿಸ್ನಾ ಮೇರಿ ಜೋಸೆಫ್ ಮತ್ತು ಶೆಜಿನ್ ನಡುವಿನ ಅಂತರ ಧರ್ಮೀಯ ಮದುವೆಯಲ್ಲಿ ಮಧ್ಯಪ್ರವೇಶ ಮಾಡಲು ಕೇರಳ ಹೈಕೋರ್ಟ್ ನಿರಾಕರಿಸಿದೆ. ಉದ್ದೇಶಪೂರ್ವಕ, ಒಪ್ಪಿತ ಮದುವೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಆಡಳಿತಾರೂಢ ಸಿಪಿಐ(ಎಂ)ನ ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‍ಐ) ಸದಸ್ಯ ಶೆಜಿನ್ ಮತ್ತು ಕ್ರಿಶ್ಚಿಯನ್ ಮಹಿಳೆ ಜೋಯಿಸ್ನಾ ಮೇರಿ ಜೋಸೆಫ್ ಮದುವೆ ಕೇರಳದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಇದನ್ನು ಲವ್ ಜಿಹಾದ್ ಎಂದು ವಿವಾದ ಸೃಷ್ಟಿಸಲಾಗಿತ್ತು. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಶ್ಚಿಯನ್ ಯುವತಿ ಜೋಯಿಸ್ನಾ ಮೇರಿ ಜೋಸೆಫ್ ತಂದೆ ಕೇರಳ ಹೈಕೋರ್ಟ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ತಮ್ಮ ಮಗಳನ್ನು ಒತ್ತಾಯಪೂರ್ವಕವಾಗಿ ಇರಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಈ ಅರ್ಜಿಯನ್ನು ನ್ಯಾ.ವಿ.ಜಿ ಅರುಣ್ ಮತ್ತು ನ್ಯಾ. ಸಿ.ಎಸ್ ಸುಧಾ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತು.

ತಂದೆ ಸಲ್ಲಿಸಿದ್ದ ಅರ್ಜಿಗೆ ಅಫಿಡವಿಟ್ ಸಲ್ಲಿಸಿದ್ದ ಜೋಯಿಸ್ನಾ ಮೇರಿ ಜೋಸೆಫ್ ತಾವು ಸ್ವಇಚ್ಛೆಯಿಂದ ಮದುವೆಯಾಗಿದ್ದು ಒತ್ತಾಯಪೂರ್ವಕವಾಗಿ ಬಂಧಿಯಾಗಿಲ್ಲ ತನ್ನಿಷ್ಟದಂತೆ ಮದುವೆಯಾಗಿದೆ ಎಂದು ಮಾಹಿತಿ ನೀಡಿದ್ದರು. ವಿಚಾರಣೆ ವೇಳೆ ಹೇಳಿಕೆ ಪರಿಶೀಲಿಸಿದ ಕೋರ್ಟ್ ಒಪ್ಪಿತ ಮದುವೆಗಳಲ್ಲಿ ಮಧ್ಯಪ್ರದೇಶ ಮಾಡುವುದಿಲ್ಲ ಎಂದು ತಿಳಿಸಿ ಅರ್ಜಿ ಇತ್ಯರ್ಥ ಪಡಿಸಿತು. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ

ಯುವತಿಯು ಶೆಜಿನ್ ಜೊತೆಗೆ ಒಪ್ಪಿಗೆಯೊಂದಿಗೆ ಮದುವೆಯ ಬಂಧನ ಹೊಂದಿದ್ದು ಒತ್ತಾಯಪೂರ್ವಕವಾಗಿ ಅಲ್ಲ ಎಂದಿದ್ದಾರೆ. ಮತ್ತು ಅವರು ಹೆತ್ತವರೊಂದಿಗೆ ಸದ್ಯ ಸಂಪರ್ಕ ಹೊಂದಲು ನಿರಾಕರಿಸಿದ್ದಾರೆ. ಉದ್ದೇಶಿತ ವಿವಾಹದ ಸೂಚನೆಯ ಪ್ರತಿಯನ್ನು ವಿವಾಹ ಅಧಿಕಾರಿ, ಕೋಲಂಚೇರಿ ಅವರಿಗೆ ಸಲ್ಲಿಸಲಾಗಿದೆ.

ನಾವು ಅರ್ಥಮಾಡಿಕೊಂಡಂತೆ, ಅವಳು ಜಗತ್ತನ್ನು ನೋಡಿದ 26 ವರ್ಷದ ಯುವತಿ, ಅವಳು ವಿದೇಶದಲ್ಲಿ ಕೆಲಸ ಮಾಡಿ ಹಿಂತಿರುಗಿದಳು. ಅವಳು ತನ್ನದೇ ಆದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮಥ್ರ್ಯ ಹೊಂದಿದ್ದಾಳೆ. ಇದರಲ್ಲಿ ಯಾವುದೇ ಅಕ್ರಮ ಬಂಧನವಿಲ್ಲ ಎಂದು ಮನವರಿಕೆ ಮಾಡಿಕೊಂಡು, ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

Comments

Leave a Reply

Your email address will not be published. Required fields are marked *