ಪ್ರೇಯಸಿಯ ಜೊತೆ ಸುತ್ತಾಡಿದ್ದಕ್ಕೆ ಮಾಜಿ ಲವ್ವರಿನಿಂದ ಹೊಸ ಸ್ನೇಹಿತನಿಗೆ ಚಾಕು ಇರಿತ

ಮೈಸೂರು: ಲವ್ ಬ್ರೇಕ್‍ಅಪ್ ಆದ ನಂತರ ಯುವತಿ ಬೇರೋಬ್ಬನ ಜೊತೆ ಒಡನಾಟ ಹೊಂದಿದ್ದಕ್ಕೆ ಸಿಟ್ಟಿಗೆದ್ದ ಮಾಜಿ ಪ್ರಿಯಕರ ಯುವತಿಯ ಹೊಸ ಗೆಳೆಯನಿಗೆ ಚಾಕು ಇರಿದಿದ್ದಾನೆ.

ಮೈಸೂರಿನ ನೆಹರು ವೃತ್ತದ ಬಳಿ ಘಟನೆ ನಡೆದಿದ್ದು, ಯುವತಿಯ ಹಳೆ ಲವ್ವರ್ ಮಹಮದ್ ರಫಿ ಎನ್‍.ಆರ್.ಮೊಹಲ್ಲಾದ ನಯಾಜ್ ಪಾಷಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ.

ಮಹಮದ್ ರಫಿ ತನ್ನ ಏರಿಯಾದಲ್ಲೇ ವಾಸವಾಗಿದ್ದ ಸಬೀನಾಳನ್ನು ಕಳೆದ 8 ವರ್ಷ ಪ್ರೀತಿಸುತ್ತಿದ್ದ. ಆದರೆ 2 ವರ್ಷಗಳ ಹಿಂದೆ ಸಣ್ಣ ಪುಟ್ಟ ಜಗಳವಾಗಿದ್ದರಿಂದ ಸಬೀನಾ ಜೊತೆ ಮಹಮ್ಮದ್ ರಫಿ ಬ್ರೇಕ್‍ಅಪ್ ಮಾಡಿಕೊಂಡಿದ್ದ. ಇವರ ಲವ್ ಕಹಾನಿ ಅಲ್ಲಿಗೆ ನಿಂತಿತ್ತು. ಆದರೆ ಇತ್ತೀಚೆಗೆ ಸಬೀನಾ ನಯಾಜ್ ಜೊತೆ ಹೆಚ್ಚು ಒಡನಾಟ ಹೊಂದಿದ್ದಳು. ಇದನ್ನು ಗಮನಿಸಿದ ಮಹಮ್ಮದ್ ರಫಿ ಸಿಟ್ಟಿಗೆದ್ದು ಇಂದು ನಯಾಜ್ ಪಾಷನಿಗೆ ಚಾಕುವಿನಿಂದ ಇರಿದಿದ್ದಾನೆ.

ಘಟನೆ ನಂತರ ಉದಯಗಿರಿ ಪೊಲೀಸರು ಮಹಮ್ಮದ್ ರಫಿಯನ್ನು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ನಯಾಜ್ ಪಾಷನನ್ನು ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *