ಬೆಳಗಾವಿ: ಭಿಕ್ಷೆ ಬೇಡುತ್ತಾ ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಲಾರಿಯೊಂದು ಹರಿದು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.
ಬೆಳಗಾವಿ ನಗರದ ಕೃಷ್ಣದೇವರಾಯ ವೃತ್ತದ ಸಿಗ್ನಲ್‌ನಲ್ಲಿ ವೃದ್ಧನೋರ್ವ ಭಿಕ್ಷೆ ಬೇಡುತ್ತಿದ್ದರು. ಈ ವೇಳೆ ಸಿಗ್ನಲ್ ಬಿಡುತ್ತಿದ್ದಂತೆ ವೃದ್ಧ ರಸ್ತೆ ದಾಟುತ್ತಿದ್ದರು. ಇದೇ ಸಮಯಕ್ಕೆ ಲಾರಿ ಚಾಲಕನೋರ್ವ ಲಾರಿಯನ್ನು ಮುಂದೆ ಚಲಾಯಿಸಿದ ಪರಿಣಾಮ ಭಿಕ್ಷುಕ ಲಾರಿ ಚಕ್ರದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಅಪಘಾತದ ಭೀಕರ ದೃಶ್ಯ ಅಲ್ಲಿಯೇ ಇದ್ದ ಸಿಸಿಟವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ – 30 ಲಕ್ಷ ಮೌಲ್ಯದ ಐಫೋನ್ ದೋಚಿದ್ದ ಗ್ಯಾಂಗ್ ಅರೆಸ್ಟ್
ಸದ್ಯ ಬೆಳಗಾವಿ ಉತ್ತರ ಸಂಚಾರಿ ಪೊಲೀಸರು ಅಪಘಾತ ಮಾಡಿದ ಲಾರಿ, ಲಾರಿ ಚಾಲಕನನ್ನ ವಶಕ್ಕೆ ಪಡೆದಿದ್ದು, ಅಪರಿಚಿತ ಭಿಕ್ಷುನ ಗುರುತು ಪತ್ತೆ ಹಚ್ಚುತ್ತಿದ್ದಾರೆ.
