ಕಾಫಿಯಲ್ಲಿ ಅರಳಿದ ರಾಮಮಂದಿರ; ಕೇಕ್‌ನಲ್ಲಿ ಮೂಡಿಬಂದ ಶ್ರೀರಾಮಚಂದ್ರ

– ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರಾಮನ ಚಿತ್ರಕ್ಕೆ ಬಣ್ಣ ತುಂಬಿದ ಬಾಲೆ

ಬೆಂಗಳೂರು: ಅಯೋಧ್ಯೆ ರಾಮಮಂದಿರದ (Ayodhya Ram Mandir) ಉದ್ಘಾಟನೆಯ ಸಂಭ್ರಮ ಈಗಾಗಲೇ ದೇಶದ ತುಂಬೆಲ್ಲ ಹರಡಿದೆ. ರಾಮನ ಭಕ್ತಾದಿಗಳು ವಿವಿಧ ರೀತಿಯಲ್ಲಿ ರಾಮನಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ. ಅದರಂತೆ ರಾಜ್ಯದ ಭಕ್ತಾದಿಗಳಲ್ಲೂ ರಾಮಜಪ ಶುರುವಾಗಿದೆ.

ಇದೇ ಸೋಮವಾರ (ಜ.22) ಇಡೀ ದೇಶವೇ ಕಾಯುತ್ತಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ರಾಮನ ವಿಶೇಷತೆಗಳನ್ನು ಮಾಡಲಾಗುತ್ತಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಾಫಿ ಕನ್‌ಫೇಷನ್ಸ್‌ನ con ಕೆಫೆಯಲ್ಲಿ ಘಮ ಘಮ ಕಾಫಿಯಲ್ಲಿ ಶ್ರೀರಾಮಮಂದಿರವನ್ನು ಅರಳಿಸಲಾಗಿದೆ. ಇದನ್ನೂ ಓದಿ: Ayodhya Ram Mandir: ಸರಯೂ ನದಿಯ ತೀರಕ್ಕೆ ಕರ್ನಾಟಕದ ಸಪ್ತರ್ಷಿಗಳು

ಸುಮಾರು 15 ದಿನಗಳ ಕಾಲ ತೆಗೆದುಕೊಂಡು ವಿಶಿಷ್ಟ ಕಲೆಯಿಂದ ಇದನ್ನು ಮಾಡಲಾಗಿದೆ. ಕಾಫಿಯಲ್ಲಿಯೇ ಜೈ ಶ್ರೀರಾಮ್‌ ಅಂತಾ ಬರೆಯಲಾಗಿದೆ. ಜೊತೆಗೆ ಕೇಕ್‌ನಲ್ಲಿ ಶ್ರೀರಾಮ ಮೂಡಿ ಬಂದಿದ್ದಾನೆ ಅಂತಾ ಕಾಫಿ ಕನ್‌ಫೇಷನ್ಸ್ ಮಾಲೀಕ ಜಿ.ಕೆ.ಪ್ರಮೋದ್ ಹೇಳಿದ್ದಾರೆ.

ತುಮಕೂರಿನ ಮಧುಗಿರಿಯ ದೀಪಿಕಾ, ಅವಿನಾಶ್ ದಂಪತಿಯ ಪುತ್ರಿ 1ನೇ ತರಗತಿ ಓದುತ್ತಿರುವ ಅನ್ವಿಕಾ ಕೆ.ಎ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಶ್ರೀರಾಮನ ಚಿತ್ರಕ್ಕೆ ಬಣ್ಣ ತುಂಬಿದ್ದಾಳೆ. ಜೈ ಶ್ರೀರಾಮ್ ಅಂತಲೂ ಬರೆದಿದ್ದಾಳೆ. ಈ ಬಗ್ಗೆ ಅನ್ವಿಕಾ ತಾಯಿ ದೀಪಿಕಾ ಮಾತನಾಡಿ, ಶ್ರೀರಾಮನ ಭಕ್ತಿಯನ್ನು ಈ ಮೂಲಕ ಸಲ್ಲಿಸುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತರಿಗೆ ಆಹ್ವಾನ