ಸರ್ ಬೇಡ, ರಾಹುಲ್ ಎಂದು ಕರೆಯಿರಿ – ವಿದ್ಯಾರ್ಥಿನಿ ರಿಯಾಕ್ಷನ್ ವಿಡಿಯೋ ನೋಡಿ

ಚೆನ್ನೈ: ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ಇಂದು ನೂರಾರು ವಿದ್ಯಾರ್ಥಿಗಳ ಜೊತೆ ಸಂವಾದವನ್ನು ಮಾಡಿದ್ದಾರೆ.

ಈ ವೇಳೆ ರಾಹುಲ್ ಗಾಂಧಿ ಅವರನ್ನು ಪ್ರಶ್ನೆ ಕೇಳಲು ವಿದ್ಯಾರ್ಥಿಯೊಬ್ಬಳು ಎದ್ದು ನಿಂತು ರಾಹುಲ್ ಸರ್ ಎಂದು ಪ್ರಶ್ನೆ ಆರಂಭಿಸಿದ್ದಾಳೆ. ಆಗ ರಾಹುಲ್ ಗಾಂಧಿ “ನನ್ನನ್ನು ಸರ್ ಬದಲಿಗೆ ರಾಹುಲ್ ಎಂದು ಕರೆಯಿರಿ” ಎಂದು ಹೇಳಿದ್ದಾರೆ. ಆಗ ವಿದ್ಯಾರ್ಥಿನಿ ನಕ್ಕಿದ್ದು, ಅಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ನಕ್ಕಿದ್ದಾರೆ. ಒಂದರೆಡು ಸೆಕೆಂಡ್ ವಿದ್ಯಾರ್ಥಿ ಸುಮ್ಮನೆ ನಿಂತಿದ್ದು, ಬಳಿಕ ಅವರು ಹೇಳಿದಂತೆ ರಾಹುಲ್ ಎಂದು ಕರೆದು ಪ್ರಶ್ನೆ ಕೇಳಿದ್ದಾಳೆ.

ರಾಹುಲ್ ಗಾಂಧಿ ಅವರು ಬೂದು ಬಣ್ಣದ ಟಿ-ಶರ್ಟ್ ಮತ್ತು ಜೀನ್ಸ್ ಧರಸಿ ವಿದ್ಯಾರ್ಥಿಗಳ ಮದ್ಯೆ ನಿಂತುಕೊಂಡು ಸಂವಾದ ಮಾಡುತ್ತಿದ್ದರು. ಹಣಕಾಸು ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆಜ್ರಾ, “ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ಸೇರಿದಂತೆ ಹಲವು ಸಂಶೋಧನಾ ಕೇಂದ್ರಗಳು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ಶಮನಕ್ಕಾಗಿ ನಿಮ್ಮ ನಿರ್ಧಾರಗಳೇನು” ಎಂದು ಪ್ರಶ್ನೆ ಮಾಡಿದ್ದಾಳೆ.

ಇದಕ್ಕೆ ರಾಹುಲ್ ಗಾಂಧಿ, “ಭಾರತವು ಸದ್ಯ ಶಿಕ್ಷಣಕ್ಕಾಗಿ ಕಡಿಮೆ ಖರ್ಚು ಮಾಡುತ್ತಿದೆ. ಹಣದ ಮೊತ್ತವನ್ನು ಶೇ.6ಕ್ಕೆ ಹೆಚ್ಚಳ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಇದು ಕೇವಲ ಶಿಕ್ಷಣದ ಮೇಲೆ ಖರ್ಚು ಮಾಡುವುದರ ಬಗ್ಗೆ ಮಾತ್ರವಲ್ಲ, ಶಿಕ್ಷಣದ ಮೇಲಿನ ಸ್ವಾತಂತ್ರ್ಯ ಇದರಲ್ಲಿ ಅಡಗಿದೆ ಎಂದು ರಾಹುಲ್ ಗಾಂಧಿಯವರು ಉತ್ತರಿಸಿದರು.

ಸಂವಾದದಲ್ಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಶ್ನೆಗೆ, “2019ರಲ್ಲಿ ನಾವು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಮಾಡಲಿದ್ದು, ಅವರಿರು ಉದ್ಯೋಗದಲ್ಲಿ 33% ರಷ್ಟು ಮೀಸಲಾತಿ ಪಡೆಯುತ್ತಾರೆ. ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಚುರುಕಾದವರು ಎಂದು ನಾನು ಭಾವಿಸುತ್ತೇನೆ” ಎಂದು ರಾಹುಲ್ ಉತ್ತರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *