Exit Polls | ಕೇರಳದಲ್ಲೂ ಖಾತೆ ತೆರೆಯಲಿದೆ ಬಿಜೆಪಿ

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕೇರಳದಲ್ಲಿ (Kerala) ಬಿಜೆಪಿ (BJP) ಖಾತೆ ತೆರೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಪೂಲ್‌ ಹಬ್‌ ಸಮೀಕ್ಷೆಯ ಪ್ರಕಾರ ಎನ್‌ಡಿಎ 1-3 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಯುಡಿಎಫ್‌ ಮೈತ್ರಿಕೂಟ 15-18, ಎಲ್‌ಡಿಎಫ್‌ 2-5 ಸ್ಥಾನ ಗೆಲ್ಲಬಹುದು ಹೇಳಿದೆ. ಯುಡಿಎಫ್‌ 45%, ಎಲ್‌ಡಿಎಫ್‌ 36%, ಎನ್‌ಡಿಎ 16%, ಇತರರು 3% ಮತ ಗಳಿಸಬಹುದು ಎಂದು ಹೇಳಿದೆ.

 

ಟುಡೇಸ್‌ ಚಾಣಕ್ಯ ಸಮೀಕ್ಷೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 4 ± 3, ಯುಡಿಎಫ್‌ 15 ± 3, ಎಲ್‌ಡಿಎಫ್‌ 1 ± 1 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ. ಟೈಮ್ಸ್‌ ನೌ ಸಮೀಕ್ಷೆ ಯುಡಿಎಎಫ್‌ 14-15, ಎಲ್‌ಡಿಎಫ್‌ 04, ಬಿಜೆಪಿ +01 ಸ್ಥಾನ ಗಳಿಸಬಹುದು ಎಂದು ಭವಿಷ್ಯ ನುಡಿದಿವೆ.

ಇಲ್ಲಿಯವರೆಗೆ ಬಿಜೆಪಿ ಕೇರಳದಲ್ಲಿ ಖಾತೆ ತೆರೆದಿಲ್ಲ. ಖಾತೆ ತೆರೆಯಬಹುದು ಎಂದು ಯಾರು ಅಂದಾಜಿಸಿಲ್ಲ. ಒಂದು ವೇಳೆ ಖಾತೆ ತೆರೆದರೆ ದಕ್ಷಿಣ ಭಾರತದ ಕೇರಳದಲ್ಲೂ ಮೋದಿ ಅಲೆ ಮ್ಯಾಜಿಕ್‌ ಮಾಡಿದೆ ಎಂದೇ ಅರ್ಥೈಸಬಹುದು.