ಸುಧಾಕರ್‌ Vs ಮುನಿಯಪ್ಪ – ರಾಜಕೀಯ ಸಂಘರ್ಷಕ್ಕೆ ಇದೆ 25 ವರ್ಷಗಳ ಇತಿಹಾಸ

ಬೆಂಗಳೂರು/ಕೋಲಾರ: ಸಚಿವರಾದ ಎಂಸಿ ಸುಧಾಕರ್ (MC Sudhakar) ಮತ್ತು ಸಚಿವ ಮುನಿಯಪ್ಪ (Muniyappa) ನಡುವಿನ ರಾಜಕೀಯ ಸಂಘರ್ಷಕ್ಕೆ 25 ವರ್ಷಗಳ ಇತಿಹಾಸವಿದೆ.

1999ರಲ್ಲಿ ಸುಧಾಕರ್ ತಂದೆ ಚೌಡರೆಡ್ಡಿಗೆ ಮುನಿಯಪ್ಪ ಚಿಂತಾಮಣಿ (Chintamani) ಕ್ಷೇತ್ರದ ಟಿಕೆಟ್‌ ತಪ್ಪಿಸಿದ್ದರು. ಮುನಿಯಪ್ಪ ವಿರೋಧದ ನಡುವೆಯೂ ಪಕ್ಷೇತರರಾಗಿ ಸ್ಪರ್ಧಿಸಿ ಚೌಡರೆಡ್ಡಿ ಗೆದ್ದಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಚೌಡರೆಡ್ಡಿಯನ್ನು ಕೊನೆಗೆ ಮುನಿಯಪ್ಪ ಪಕ್ಷದಿಂದಲೇ ಉಚ್ಛಾಟನೆ ಮಾಡಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಬಂಡಾಯ – ಮುನಿಯಪ್ಪ ಕೋಲಾರ ಎಂಟ್ರಿಗೆ ಶಾಸಕರ ವಿರೋಧ ಯಾಕೆ?

 

ಸಾಕಷ್ಟು ಮಾತುಕತೆಯ ಬಳಿಕ ರಾಜಿಯಾಗಿ ಎಂಸಿ ಸುಧಾಕರ್ ಕಾಂಗ್ರೆಸ್‌ (Congress) ಸೇರ್ಪಡೆಯಾಗಿದ್ದರು. ನಂತರ ಚಿಂತಾಮಣಿಯಿಂದ 2004 ಹಾಗೂ 2008 ಸತತ 2 ಬಾರಿ ಕಾಂಗ್ರೆಸ್ ಶಾಸಕರಾಗಿ ಸುಧಾಕರ್ ಆಯ್ಕೆಯಾದರು.

ಈ ಎರಡೂ ಅವಧಿಯಲ್ಲೂ ಮುನಿಯಪ್ಪ ಹಾಗೂ ಸುಧಾಕರ್ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಕಡೆಗೆ ದೊಡ್ಡಜಗಳ ನಡೆದು ಕಾಂಗ್ರೆಸ್ ಪಕ್ಷವನ್ನೇ ಸುಧಾಕರ್ ತೊರೆದಿದ್ದರು.  ಇದನ್ನೂ ಓದಿ: ಮುನಿಯಪ್ಪ ಅಳಿಯನಿಗೆ ಕೋಲಾರ ಟಿಕೆಟ್ ಕೊಟ್ಟರೆ ರಾಜೀನಾಮೆ – ‘ಕೈ’ ಎಂಎಲ್‌ಸಿ, ಶಾಸಕರಿಂದ ಬೆದರಿಕೆ

 

2013, 2018ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದರು. 2023ರಲ್ಲಿ ಕಾಂಗ್ರೆಸ್‌ಗೆ ಸುಧಾಕರ್‌ ಸೇರ್ಪಡೆಯಾದರು. ಸೇರ್ಪಡೆಯಾಗುವ ಸಮಯದಲ್ಲಿ ಕೋಲಾರ ರಾಜಕಾರಣಕ್ಕೆ ಮುನಿಯಪ್ಪ ಪ್ರವೇಶಿಸಬಾರದು ಎಂದು ಷರತ್ತು ವಿಧಿಸಿದ್ದರು. ಈ ಷರತ್ತಿಗೆ ಕೋಲಾರದ ಹಲವು ಕಾಂಗ್ರೆಸ್‌ ನಾಯಕರು ಧ್ವನಿಗೂಡಿಸಿದ್ದರು. ಈ ಕಾರಣಕ್ಕೆ ಮುನಿಯಪ್ಪ ಅವರಿಗೆ ಹೈಕಮಾಂಡ್‌ ದೇವನಹಳ್ಳಿ ಕ್ಷೇತ್ರದ ಟಿಕೆಟ್‌ ನೀಡಿತ್ತು.