ದೋಸ್ತಿ ಪಕ್ಷದ ಪವರ್‌ ಸೆಂಟರ್‌ ಆಗಿ ಬದಲಾಯ್ತು ಹೆಚ್‌ಡಿಕೆ ನಿವಾಸ!

ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದ್ದೇ ತಡ ಅವರ ಮನೆಯೀಗ ದೋಸ್ತಿ ಪಕ್ಷಗಳ (BJP_JDS) ಪವರ್‌ಸೆಂಟರ್ ಆಗಿ ಬದಲಾಗಿದೆ.

ಆರೋಗ್ಯ ವಿಚಾರಿಸುವ ಜೊತೆ ಜೊತೆಗೆ ನಮ್ಮ ಗೆಲುವಿಗೆ ನಿಮ್ಮ ಸಹಕಾರ ಬೇಕು ಎನ್ನುತ್ತಾ ಬಿಜೆಪಿ ನಾಯಕರು ಇಂದು ಕುಮಾರಸ್ವಾಮಿ ಭೇಟಿಗೆ ಸಾಲುಗಟ್ಟಿದ್ದರು. ಇದನ್ನೂ ಓದಿ: ಅರುಣಾಚಲ ಪ್ರದೇಶ ನಮ್ಮದು.. ಭಾರತ ಆಕ್ರಮಿಸಿಕೊಂಡಿದೆ: ಚೀನಾ

ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ (Tejaswi Surya), ಚಿಕ್ಕಬಳ್ಳಾಪುರ ಅಭ್ಯರ್ಥಿ ಕೆ ಸುಧಾಕರ್ (K Sudhakar), ಬಳ್ಳಾರಿ ಅಭ್ಯರ್ಥಿ ಶ್ರೀರಾಮುಲು (Sriramulu) ಭೇಟಿ ನೀಡಿ ದಳಪತಿಗಳ ಸಹಕಾರ ಕೋರಿದರು.ಮಾಜಿ ಮಂತ್ರಿ ಗೋವಿಂದ ಕಾರಜೋಳ ಕೂಡ ಕುಮಾರಸ್ವಾಮಿ ನಿವಾಸದಲ್ಲಿ ಕಾಣಿಸಿಕೊಂಡರು. ಇದನ್ನೂ ಓದಿ: ಯುವಕರು ಏನಾದ್ರೂ ಮೋದಿ ಮೋದಿ ಅಂದ್ರೆ ಕಪಾಳಕ್ಕೆ ಹೊಡಿಯಬೇಕು: ಶಿವರಾಜ್‌ ತಂಗಡಗಿ

ಟಿಕೆಟ್ ವಂಚಿತ ಸಂಸದ ಕೊಪ್ಪಳದ ಸಂಗಣ್ಣ ಕರಡಿ ಸಹ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ನಡೆಸಿದ್ರು. ಕುಶಲ ವಿಚಾರಿಸಲು ಬಂದಿದ್ದೇ ಅಷ್ಟೇ.. ನಾನೇನು ಜೆಡಿಎಸ್ ಸೇರಲ್ಲ ಎಂದು ಸಮಜಾಯಿಷಿ ನೀಡಿದರು.