ಮಂಡ್ಯದಿಂದ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ?

ಮಂಡ್ಯ: ಲೋಕಸಭೆ ಚುನಾವಣೆಗೆ (Lok Sabha Election) ಮಂಡ್ಯದಿಂದ (Mandya) ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಸ್ಪರ್ಧಿಸುವುದು ಬಹುತೇಕ ಫಿಕ್ಸ್‌ ಆಗಿದೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ (JDS) ಕೋರ್ ಕಮಿಟಿ ಸಭೆಯಲ್ಲೂ ಕುಮಾರಸ್ವಾಮಿ ಸ್ಪರ್ಧೆಯ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಲು ಎಲ್ಲಾ ನಾಯಕರು ಒಪ್ಪಿಗೆ ನೀಡಿದ್ದಾರೆ. ಇದನ್ನೂ ಓದಿ: 2 ಸೀಟಿಗೆ ಮೈತ್ರಿ ಬೇಕಿತ್ತಾ? – ಜೆಡಿಎಸ್‌ ಅಸಮಾಧಾನಕ್ಕೆ ಕಾರಣ ಏನು?

 

ಬಿಜೆಪಿ ಹೈಕಮಾಂಡ್‌ನಿಂದಲೂ (BJP High Command) ಕುಮಾರಸ್ವಾಮಿ ಸ್ಪರ್ಧೆಗೆ ಸಮ್ಮತಿ ಸಿಕ್ಕಿದೆ. ಹೀಗಾಗಿ ಮಾರ್ಚ್‌ 25ಕ್ಕೆ ಕುಮಾರಸ್ವಾಮಿ ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮೇಘನಾ ಫುಡ್ಸ್ ಗ್ರೂಪ್ ಮೇಲೆ ಐಟಿ ದಾಳಿ

ಇಂದು ಕುಮಾರಸ್ವಾಮಿ ಚೆನ್ನೈಗೆ (Chennai) ತೆರಳಲಿದ್ದು ಮಾರ್ಚ್‌ 21 ರಂದು ಆಪರೇಷನ್‌ ನಡೆಯಲಿದೆ. ಆಪರೇಷನ್‌ ಮುಗಿಸಿದ ಬಳಿಕ ಮಂಡ್ಯದಲ್ಲಿ ಬೃಹತ್ ಸಭೆ ಆಯೋಜನೆಯಾಗಲಿದೆ. ಈ ಸಭೆಯ ಮೂಲಕ ಅಧಿಕೃತ ಚುನಾವಣಾ ಅಖಾಡಕ್ಕೆ ಹೆಚ್‌ಡಿಕೆ ಧುಮುಕಲಿದ್ದಾರೆ.

 

ಮಂಡ್ಯ ಲೋಕಸಭಾ ಚುನಾವಣೆ ಸಂಬಂಧ ಕಳೆದ ವಾರ ಮಂಡ್ಯದಲ್ಲಿ ನಡೆದ ಸಭೆಯಲ್ಲಿ ನೀವೇ ಕಣಕ್ಕೆ ಇಳಿಯಬೇಕು ಇಲ್ಲದಿದ್ದರೆ ನಿಖಿಲ್‌ ಕುಮಾರಸ್ವಾಮಿ ಕಣಕ್ಕೆ ಇಳಿಯಬೇಕು ಎಂದು ಕುಮಾರಸ್ವಾಮಿ ಅವರಿಗೆ ಒತ್ತಡ ಹಾಕಿದ್ದರು.