ಬಿಜೆಪಿ ಅಸಮಾಧಾನಿತರಿಗೆ ಕಾಂಗ್ರೆಸ್ ಗೇಟ್ ಬಂದ್ – ಸಿಎಂ ಹೇಳಿದ ಖಡಕ್‌ ಮಾತು ಏನು?

ಮೈಸೂರು: ಬಿಜೆಪಿ (BJP) ಅಸಮಾಧಾನಿತ ನಾಯಕರ ಕಾಂಗ್ರೆಸ್‌ (Congress) ಗೇಟ್‌ ಬಂದ್‌ ಆಗಿದೆ. ಲೋಕಸಭಾ ಚುನಾವಣಾ (Lok Sabha Election) ಹೊಸ್ತಿಲಲ್ಲಿ ಟಿಕೆಟ್‌ಗಾಗಿ ಕಾಂಗ್ರೆಸ್ ಸೇರುವ ಬಿಜೆಪಿಗರ ಆಸೆಗೆ ಸಿಎಂ ಸಿದ್ದರಾಮಯ್ಯ (Siddaramaiah) ತಣ್ಣೀರು ಹಾಕಿದ್ದಾರೆ.

ಮೈಸೂರು ಕ್ಷೇತ್ರದಿಂದ ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಕಣಕ್ಕೆ ಇಳಿಸುವ ಪ್ರಸ್ತಾಪಕ್ಕೆ ಒಂದೇ ಮಾತಿನಲ್ಲಿ ಸಿಎಂ ಸಿದ್ದರಾಮಯ್ಯ ಆಗುವುದಿಲ್ಲ ಎಂದು ಖಡಕ್‌ ಆಗಿ ಹೇಳಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮಂಡ್ಯದಿಂದ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ?

ಬೆಂಗಳೂರು ಭಾಗದ ಪ್ರಭಾವಿ ಬಿಜೆಪಿ ಶಾಸಕರೊಬ್ಬರು ಕಾಂಗ್ರೆಸ್ ಜೊತೆ ಈಗಲೂ ಉತ್ತಮ ಸಂಬಂಧ ಹೊಂದಿದ್ದು ಅವರು ಬಿಜೆಪಿಯ ಮಾಜಿ ಮುಖ್ಯಮಂತ್ರಿಯನ್ನು ಕಾಂಗ್ರೆಸ್‌ ಸೇರಿಸುವ ಪ್ರಯತ್ನ ನಡೆಸಿದ್ದರು. ಇದನ್ನೂ ಓದಿ: 2 ಸೀಟಿಗೆ ಮೈತ್ರಿ ಬೇಕಿತ್ತಾ? – ಜೆಡಿಎಸ್‌ ಅಸಮಾಧಾನಕ್ಕೆ ಕಾರಣ ಏನು?

ಮೈಸೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿ ಮಾಜಿ ಮುಖ್ಯಮಂತ್ರಿಯನ್ನು ಕಣಕ್ಕೆ ಇಳಿಸೋಣ. ನಾನು ಮಾತನಾಡಿದ್ದು ಅವರು ಸ್ಪರ್ಧಿಸಲು ಒಪ್ಪಿಗೆ ನೀಡಿದ್ದಾರೆ. ನೀವು ಅನುಮತಿ ನೀಡಿದರೆ ಪಕ್ಷಕ್ಕೆ ಕರೆದುಕೊಂಡು ಬರುತ್ತೇನೆ ಎಂದು ತಿಳಿಸಿದ್ದರು.

ಆಪರೇಷನ್ ಕಾಂಗ್ರೆಸ್‌ಗೆ ಒಪ್ಪದ ಸಿಎಂ, ಬಿಜೆಪಿಯ ನಾಯಕರು ಚುನಾವಣೆ ವೇಳೆ ಕಾಂಗ್ರೆಸ್ ಸೇರಿ ಟಿಕೆಟ್ ಪಡೆಯುವುದು ಬೇಡ. ಜಗದೀಶ್ ಶೆಟ್ಟರ್ ಕೇಸ್‌ನಿಂದ ನಾವು ಪಾಠ ಕಲಿತ್ತಿದ್ದೇವೆ. ಸೋತರೂ, ಗೆದ್ದರೂ ನಮ್ಮ ಪಕ್ಷದವರೇ ಇರಲಿ. ಇನ್ನೊಮ್ಮೆ ಆ ರೀತಿಯ ತಪ್ಪು ಮಾಡಬಾರದು. ಬರುವುದಿದ್ದರೆ ಚುನಾವಣೆ ನಂತರ ಕಾಂಗ್ರೆಸ್‌ಗೆ ಬರಲಿ. ಆಗ ಸೇರ್ಪಡೆಯಾದರೆ ಅವರಿಗೆ ಏನಾದರೂ ವ್ಯವಸ್ಥೆ ಮಾಡೋಣಾ ಎಂದು ಹೇಳಿ ಆಪರೇಷನ್‌ ಕಾಂಗ್ರೆಸ್‌ಗೆ ಬ್ರೇಕ್‌ ಹಾಕಿದ್ದಾರೆ.