ಕಾಂಗ್ರೆಸ್‌ನಲ್ಲಿ ಬಂಡಾಯ – ಮುನಿಯಪ್ಪ ಕೋಲಾರ ಎಂಟ್ರಿಗೆ ಶಾಸಕರ ವಿರೋಧ ಯಾಕೆ?

ಬೆಂಗಳೂರು: ಎರಡನೇ ಹಂತದ ಲೋಕಸಭೆ ಚುನಾವಣೆಗೆ (Lok Sabha Election) ನೋಟಿಫಿಕೇಶನ್ ಹೊರಬಿದ್ದಿದೆ. ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕದ 14 ಕ್ಷೇತ್ರಗಳಿಗೆ ಗುರುವಾರದಿಂದ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗಲಿದೆ. ಈ ಹೊತ್ತಲ್ಲಿ ಕೋಲಾರ (Kolara) ಟಿಕೆಟ್ ವಿಚಾರವಾಗಿ ಕಾಂಗ್ರೆಸ್‌ನಲ್ಲಿ (Congress) ದೊಡ್ಡ ಸಂಘರ್ಷವೇ ನಡೆದಿದೆ. ಟಿಕೆಟ್ ಲಾಬಿಯಲ್ಲಿ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಮೇಲುಗೈ ಸಾಧಿಸಿದಂತೆ ಕಂಡುಬಂದಿದೆ.

ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಎಲ್ಲಾ ಆಗಿದ್ಯಲ್ಲ. ಮುನಿಯಪ್ಪ ಇಲ್ಲೇ ಇದ್ದಾರೆ. ಅವರನ್ನೇ ಕೇಳಿ ಎನ್ನುತ್ತಾ ಮುಂದೆ ಸಾಗಿದರು. ಇದು ಮುನಿಯಪ್ಪ ಪರ ತೀರ್ಮಾನ ಆಗಿದೆ ಎಂಬ ಸಂಕೇತದಂತೆ ಇತ್ತು. ಹೀಗಾಗಿ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಸಿಗಲಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಕೋಲಾರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿತು.  ಇದನ್ನೂ ಓದಿ: ಅಂಬರೀಶ್‌ ಬದುಕಿದ್ದಾಗ ಜೊತೆಗೆ ಊಟ ಮಾಡಿದ್ದೀವಿ.. ಸುಮಲತಾ ನನಗೆ ಊಟ ಬಡಿಸಿದ್ದಾರೆ: ಹೆಚ್‌ಡಿಕೆ

 

ರಮೇಶ್ ಕುಮಾರ್ ಬಣ ಕೆರಳಿದ್ದು, ಸಚಿವ ಎಂಸಿ ಸುಧಾಕರ್ ಸೇರಿ ಮೂವರು ಶಾಸಕರು, ಇಬ್ಬರು ಎಂಎಲ್‌ಸಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಬೆದರಿಕೆ ಹಾಕುವ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಒಂದೊಮ್ಮೆ ಚಿಕ್ಕಪೆದ್ದಣ್ಣಗೆ ಟಿಕೆಟ್ ಘೋಷಿಸಿದರೆ ರಾಜೀನಾಮೆ ನೀಡಿಯೇ ತೀರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದರಿಂದ ಹೈಕಮಾಂಡ್ ಅಡಕತ್ತರಿಯಲ್ಲಿ ಸಿಲುಕಿದೆ. ಗಮನಿಸಬೇಕಾದ ವಿಷಯ ಅಂದರೆ ಬಂಡಾಯದ ಸೂತ್ರಧಾರ ಎನ್ನಲಾಗುತ್ತಿರುವ ರಮೇಶ್ ಕುಮಾರ್ (Ramesh Kumar) ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.  ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್ – ಬೆಂಗ್ಳೂರು, ಶಿವಮೊಗ್ಗ, ಹುಬ್ಬಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ

ಯಾರೆಲ್ಲಾ ಬಂಡಾಯ?
1. ಎಂಸಿ ಸುಧಾಕರ್, ಸಚಿವ
2. ಕೊತ್ತೂರು ಮಂಜುನಾಥ್, ಕೋಲಾರ ಶಾಸಕ
3. ನಂಜೇಗೌಡ, ಮಾಲೂರು ಶಾಸಕ
4 ಅನಿಲ್ ಕುಮಾರ್, ಎಂಎಲ್‌ಸಿ
5. ನಜೀರ್ ಅಹ್ಮದ್, ಎಂಎಲ್‌ಸಿ

 

ಮುನಿಯಪ್ಪ ಕೋಲಾರ ಎಂಟ್ರಿಗೆ ವಿರೋಧ ಏಕೆ?
ಕೆಹೆಚ್ ಮುನಿಯಪ್ಪ ದೇವನಹಳ್ಳಿ ಶಾಸಕರಾಗಿದ್ದು ತಮ್ಮ `ಹೈ’ಲೆವೆಲ್ ಪ್ರಭಾವ ಬಳಸಿ ಸಚಿವರಾಗಿದ್ದಾರೆ. ಮುನಿಯಪ್ಪ ಪುತ್ರಿ ರೂಪ ಶಶಿಧರ್ (Roopa Shashidhar) ಕೆಜಿಎಫ್ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದರೆ ಬೇರೆಯವರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಚಿಕ್ಕಪೆದ್ದಣ್ಣ ಮೂಲತಃ ಕೋಲಾರದವರಲ್ಲ. ಮುನಿಯಪ್ಪ ಮತ್ತೆ ಕೋಲಾರಕ್ಕೆ ಬಂದರೆ ಬಣಜಗಳ ಹೆಚ್ಚಾಗುತ್ತದೆ. ಮುನಿಯಪ್ಪ ಕುಟುಂಬಕ್ಕೆ ಟಿಕೆಟ್‌ ಬೇಡ. ಬೇರೆ ಯಾರಿಗೆ ಬೇಕಾದರೂ ಟಿಕೆಟ್‌ ನೀಡಿ ಪಕ್ಷವನ್ನು ಉಳಿಸಬೇಕು.