ಬಾಗಲಕೋಟೆ: ಅರಣ್ಯವೀಕ್ಷಕ ಹುದ್ದೆಗೆ ಡೀಲ್ ಶಂಕೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ಕೃಪಾ ಲಾಡ್ಜ್ ಮೇಲೆ ಶಹರಾ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.
ಸೋಮವಾರ ತಡರಾತ್ರಿ ದಾಳಿ ನಡೆದಿದ್ದು, ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಿಂದ ಮಹಿಳೆಯರೂ ಸೇರಿದಂತೆ ನೂರಾರು ಜನ ನೌಕರಿ ಆಕಾಂಕ್ಷಿಗಳು ಕೃಪಾ ಹಾಗೂ ಆರಾಧನಾ ಲಾಡ್ಜ್ ನಲ್ಲಿ ತಂಗಿದ್ದರು.
ನೌಕರಿಗಾಗಿ ಮಧ್ಯವರ್ತಿಯೊಬ್ಬರ ಮೂಲಕ ಲಕ್ಷಾಂತರ ರೂಪಾಯಿ ಡೀಲ್ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಆದರೆ ಪೊಲೀಸರು ಬರುವ ಮಾಹಿತಿ ತಿಳಿದು, ಲಾಡ್ಜ್ ಗೆ ಬರುತ್ತಿದ್ದಂತೆ ಡೀಲರ್ ಗಳು ಕಾಲ್ಕಿತ್ತಿದ್ದಾರೆ.
ಲಾಡ್ಜ್ ನಲ್ಲಿ ಮಹಿಳೆಯರು ಕೂಡಾ ವಾಸ್ತವ್ಯ ಹೂಡಿದ್ದರು. ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅರಣ್ಯ ವೀಕ್ಷಕ ಹುದ್ದೆಗೆ ಎರಡು ದಿನಗಳ ಹಿಂದೆ ಬಾಗಲಕೋಟೆ ನಗರದಲ್ಲಿ ಸಂದರ್ಶನ ನಡೆದಿತ್ತು. ಅರಣ್ಯ ವೀಕ್ಷಕ ಹುದ್ದೆಗಾಗಿ ಬಾರಿ ಡೀಲ್ ನಡೆದಿತ್ತು ಎನ್ನಲಾಗಿದೆ. ಆದರೆ ತನಿಖೆ ನಂತರ ಪ್ರಕರಣ ಸತ್ಯಾಂಶ ಹೊರಬರಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply