ಲಾಕ್‍ಡೌನ್ ವಿಸ್ತರಣೆಗೆ ಇಂದು ನಿರ್ಣಾಯಕ ದಿನ-ರಾಜ್ಯಗಳಿಂದ ಕೇಂದ್ರ ಸರ್ಕಾರಕ್ಕೆ ವರದಿ

ನವದೆಹಲಿ: ಲಾಕ್‍ಡೌನ್, ಸೀಲ್ಡ್ ಔಟ್, ಬಂದ್ ಮುಂದುವರಿಯುತ್ತಾ? ಎಲ್ಲವೂ ತೆರವಾಗಿ ಆಗಿ ಮತ್ತೆ ಸ್ವತಂತ್ರವಾಗಿ ಓಡಾಡಬಹುದಾ? ಕೇಂದ್ರ ಸರ್ಕಾರದ ನಿಲುವೇನು? ಹೀಗೆ ಭಾರತ್ ಲಾಕ್ ಡೌನ್ ಸಂಬಂಧ ಕಳೆದರಡು ದಿನಗಳಿಂದ ನೂರೆಂಟು ಪ್ರಶ್ನೆಗಳು ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಇಂದು ನಿರ್ಣಾಯಕ ದಿನವಾಗುವ ಸಾಧ್ಯತೆ ಇದೆ.

ಈ ಮನೆಯಲ್ಲಿ ಕೂತು ಕೂತು ಸಾಕಾಗಿದೆ ಇನ್ನೇನು ಲಾಕ್ ಡೌನ್ ಮುಗಿತು ಅಂದುಕೊಂಡವರಿಗೆ ಬಿಗ್ ಶಾಕ್ ಶೀಘ್ರದಲ್ಲಿ ಕಾದಿದೆ. ಹೌದು ಲಾಕ್ ಡೌನ್ ವಿಸ್ತರಣೆ ಸಂಬಂಧ ಇಂದು ಮಹತ್ವದ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಲಾಕ್ ಡೌನ್ ಮುಂದುವರಿಸುವಂತೆ ಎಂಟಕ್ಕೂ ಹೆಚ್ಚು ರಾಜ್ಯಗಳು ಮನವಿ ಮಾಡಿಕೊಂಡಿದೆ. ಒಡಿಶಾ ಒಂದು ಹಂತಕ್ಕೆ ಮುಂದೆ ಹೋಗಿ ಎಪ್ರೀಲ್ 30 ವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈಗ ದೇಶದಲ್ಲಿ ಲಾಕ್ ಡೌನ್ ಮುಂದುವರಿಸಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಗೊಂದಲಿದ್ದು, ಈ ಸಂಬಂಧ ವರದಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಕೇಳಿತ್ತು.

ಎಲ್ಲ ರಾಜ್ಯ ಸರ್ಕಾರಗಳು ತಮ್ಮ ಅಭಿಪ್ರಾಯದ ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಸಾಧ್ಯತೆ ಇದೆ. ಈ ವರದಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪರಿಶೀಲನೆ ನಡೆಸಲಿದ್ದಾರೆ. ಇಂದು ಬಹುತೇಕ ಎಲ್ಲ ರಾಜ್ಯಗಳು ತಮ್ಮ ವರದಿ ನೀಡಲಿದ್ದು ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಈ ವೇಳೆ ಕೆಲವು ರಾಜ್ಯಗಳು ತಮ್ಮ ಅಭಿಪ್ರಾಯವನ್ನು ನೇರವಾಗಿ ಪ್ರಧಾನಿ ಮುಂದಿಡಲಿವೆ.

ಈ ಎಲ್ಲ ಅಭಿಪ್ರಾಯಗಳನ್ನು ಪಡೆದುಕೊಳ್ಳಲಿರುವ ಪ್ರಧಾನಿ ಮೋದಿ ಎಪ್ರಿಲ್ 14 ರ ಬಳಿಕ ಲಾಕ್ ಡೌನ್ ಮುಂದುವರಿಸಬೇಕಾ ಅಥವಾ ಹಂತ ಹಂತವಾಗಿ ತೆರವು ಮಾಡಬೇಕಾ ಅನ್ನೋದು ನಿರ್ಧಾರ  ಮಾಡಲಿದ್ದು, ಇಂದು ರಾಜ್ಯಗಳು ನೀಡುವ ವರದಿ ನಿರ್ಣಾಯಕ ಪಾತ್ರ ವಹಿಸಲಿದೆ.

Comments

Leave a Reply

Your email address will not be published. Required fields are marked *