ರಾಯಚೂರಿನಲ್ಲಿ ಮಧ್ಯಾಹ್ನವೇ ಮದ್ಯದಂಗಡಿಗಳು ಕ್ಲೋಸ್

– ಅಂತರರಾಜ್ಯ ಗಡಿಯಲ್ಲಿ ಎಣ್ಣೆ ಮಾರಾಟ ಇಲ್ಲ
– ಮೊದಲ ದಿನ 2.5 ಕೋಟಿ ರೂ. ಮದ್ಯ ಸೇಲ್

ರಾಯಚೂರು: ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ಮದ್ಯದಂಗಡಿಗಳನ್ನ ತೆರೆದಿರುವ ಕಾರಣಕ್ಕೆ ರಾಯಚೂರಿನಲ್ಲಿ ರಸ್ತೆಗಳಲ್ಲಿ ಜನರ ಓಡಾಟವೂ ಹೆಚ್ಚಾಗಿದೆ. ಮದ್ಯದಂಗಡಿ ಮುಂದೆ ಜನರ ಕ್ಯೂ ದೊಡ್ಡದಿದೆ ಇದರ ಜೊತೆಗೆ ಜನ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಗುಂಪು ಗುಂಪಾಗಿ ಓಡಾಡುತ್ತಿದ್ದಾರೆ. ಹೀಗಾಗಿ ರಾಯಚೂರಿನಲ್ಲಿ ಮಧ್ಯಾಹ್ನ ಎರಡು ಗಂಟೆಗೆ ಎಲ್ಲ ಬಂದ್ ಮಾಡಲಾಗಿದೆ. ನಿನ್ನೆ ಸಂಜೆ 7 ಗಂಟೆವರೆಗೆ ಮದ್ಯದಂಗಡಿ ತೆರೆಯಲಾಗಿತ್ತು. ಜನರ ಓಡಾಟ ವಿಪರೀತವಾಗಿದ್ದರಿಂದ ಇಂದಿನಿಂದ ಮಧ್ಯಾಹ್ನ ಎರಡು ಗಂಟೆಗೆ ಮದ್ಯದಂಗಡಿ ಬಂದ್ ಮಾಡಲಾಗುತ್ತಿದೆ.

ಜಿಲ್ಲೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ಗಡಿರಾಜ್ಯಗಳ ಭೀತಿ ಹೆಚ್ಚಾಗಿರುವುದರಿಂದ ಗಡಿಗಳಿಂದ 5 ಕಿ.ಮೀ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನ ಬಂದ್ ಮಾಡಿದ್ದು, ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಗಡಿ ಗ್ರಾಮಗಳ ಜನ ಮದ್ಯಕ್ಕಾಗಿ ರಾಯಚೂರಿಗೆ ಬರುತ್ತಿದ್ದಾರೆ. ಬೆಳಗಿನ ಜಾವ ಬಂದು ಕ್ಯೂ ನಿಲ್ಲುತ್ತಿದ್ದಾರೆ.

ಮದ್ಯದಂಗಡಿ ಆರಂಭವಾದ ಮೊದಲನೇ ದಿನವೇ ರಾಯಚೂರಿನಲ್ಲಿ ಭರ್ಜರಿ ವ್ಯಾಪಾರವಾಗಿದೆ. 5,900 ಕೇಸ್ ನ 53,750 ಲೀಟರ್ ಮದ್ಯ ಹಾಗೂ 1,730 ಕೇಸ್‍ನ 13,895 ಲೀಟರ್ ಬಿಯರ್ ನಿನ್ನೆ ಮಾರಾಟವಾಗಿದ್ದು, 2 ಕೋಟಿ 50 ಲಕ್ಷ ರೂಪಾಯಿ ಮದ್ಯವನ್ನ ಮದ್ಯಪ್ರಿಯರು ಖರೀದಿಸಿದ್ದಾರೆ. ಜಿಲ್ಲೆಯ 89 ವೈನ್ ಶಾಪ್, 29 ಎಂಎಸ್‍ಐಎಲ್ ಅಂಗಡಿ ಸೇರಿ 118 ಮದ್ಯದಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆದಿದೆ. ಇಂದಿನಿಂದ ಮಧ್ಯಾಹ್ನವೇ ಮದ್ಯದಂಗಡಿ ಬಂದ್ ಆಗುತ್ತಿರುವ ಹಿನ್ನೆಲೆ ದೂರದಿಂದ ಬಂದವರು ನಿರಾಸೆಯಿಂದ ಮರಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *