ಬೆಂಗಳೂರು: ಇಂದಿನಿಂದ ಜೂ.6 ವರೆಗೆ ಮೂರು ದಿನ ಮದ್ಯ ಮಾರಾಟಕ್ಕೆ ನಿಷೇಧ

ಬೆಂಗಳೂರು: ಜೂ.3 ರಂದು ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರದ ಮತದಾನ ನಡೆಯುವ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದಲೇ ಸಿಲಿಕಾನ್‌ ಸಿಟಿ ಬೆಂಗಳೂರಿನ ಬಾರ್ & ರೆಸ್ಟೋರೆಂಟ್‌ಗಳ ಎಲ್ಲ ಮಾದರಿಯ ಮದ್ಯದಂಗಡಿಗಳು (Liquor Ban) ಬಂದ್ ಆಗಿದ್ದು, ಮತ್ತೆ ಎಂದಿನಂತೆ ತೆರೆಯುವುದು‌ ಜೂನ್ 7 ಕ್ಕೆ.

ಎಂಎಲ್ಸಿ ಚುನಾವಣೆ ಮತ್ತು ಲೋಕಸಭೆ ಮತ್ತು ವಿಧಾನ ಪರಿಷತ್‌ ಚುನಾವಣೆಗಳ ಮತ ಎಣಿಕೆಯ ದೃಷ್ಟಿಯಿಂದ ರಾಜ್ಯಾದ್ಯಂತ ಇಂದಿನಿಂದ ಐದು ದಿನಗಳ ಕಾಲ ಮದ್ಯ ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಇಂದು ಸಂಜೆ ನಾಲ್ಕರಿಂದ ಜೂನ್‌ 2, 4 ಮತ್ತು 6 ರಂದು ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಇನ್ನು ಜೂನ್‌ 3 ರಂದು ಭಾಗಶಃ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ಮತದಾನ ಮುಗಿದ ಮೇಲೆ ಸಂಜೆ 4 ರ ಬಳಿಕ ಒಪನ್ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ‘ಇಂಡಿಯಾ’ ಮೈತ್ರಿಕೂಟ ಕನಿಷ್ಠ 295 ಸ್ಥಾನಗಳನ್ನು ಗೆಲ್ಲಲಿದೆ: ಖರ್ಗೆ ಭರವಸೆ

ಮದ್ಯ ಮಾರಾಟ ನಿಷೇಧ ಮಾಡಿರುವುದರಿಂದ ಈ ಅವಧಿಯಲ್ಲಿ ಬಾರ್‌ ಹಾಗೂ ರೆಸ್ಟೋರೆಂಟ್‌ ಉದ್ಯಮಗಳಿಗೆ ಹೊಡೆತ ಬೀಳಲಿದೆ. ಒಂದು ವಾರಕ್ಕೆ ಅಬಕಾರಿ ಸುಂಕವಾಗಿ ಸರ್ಕಾರಕ್ಕೆ 100 ಕೋಟಿ ರೂಪಾಯಿ ಅಧಿಕ ಮೊತ್ತ ನಷ್ಟವಾಗಲಿದೆ ಎಂದು ಬಾರ್‌ ಮಾಲೀಕರ ಸಂಘ ಅಸಮಾಧಾನ ಹೊರಹಾಕಿದೆ.

4-5 ದಿನಗಳ ಕಾಲ ಮದ್ಯದಂಗಡಿಗಳ ಬಂದ್‌ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಆದರೆ ಗ್ರೀನ್‌ ಸಿಗ್ನಲ್‌ ಕೊಡದ ನ್ಯಾಯಾಲಯ ಜಿಲ್ಲಾಧಿಕಾರಿಗಳ ಆದೇಶ ಎತ್ತಿಹಿಡಿದಿದೆ. ಸಾರ್ವಜನಿಕರಿಗೆ ಆಹಾರ ಆತಿಥ್ಯ ನೀಡುವುದನ್ನು ಮುಂದುವರಿಸಲು ಅವಕಾಶ ನೀಡಬೇಕೆಂಬ ಮನವಿಗೆ ಹೈಕೋರ್ಟ್ ಅನುಮತಿ ನೀಡಿದೆ. ಒಟ್ಟಿನಲ್ಲಿ ಮುಂಜಾಗ್ರತೆಯಾಗಿ ಎಣ್ಣೆ ಸ್ಟಾಕ್‌ ಇಟ್ಟುಕೊಂಡವರಿಗೆ ವೀಕೆಂಡ್ ಎಂಜಾಯ್ ಮಾಡಿದರೆ, ಇತರೆ ಎಣ್ಣೆ ಪ್ರಿಯರು ಪರದಾಡುವುದಂತೂ ನಿಶ್ಚಿತ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆಯಲ್ಲಿ ನಾಗೇಂದ್ರ ಇದ್ದಾರೋ ಇಲ್ವೋ ಗೊತ್ತಿಲ್ಲ: ಸಚಿವ ಮಹದೇವಪ್ಪ