ಸಿಂಹದ ಜೊತೆ ಚೆಲ್ಲಾಟವಾಡಲು ಹೋಗಿ ಬೆರಳು ಕಳ್ಕೊಂಡ – ಭಯಾನಕ ವೀಡಿಯೋ ವೈರಲ್

ಜಮೈಕಾ: ಬೋನ್‍ನಲ್ಲಿದ್ದ ಸಿಂಹದ ಜೊತೆಗೆ ಚೆಲ್ಲಾಟವಾಡುತ್ತಿದ್ದ ವ್ಯಕ್ತಿ ಬೆರಳನ್ನು ಸಿಂಹ ಕಿತ್ತು ತಿಂದಿರುವ ಭಯಾನಕ ದೃಶ್ಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಜಮೈಕಾ ಮೃಗಾಲಯದಲ್ಲಿ ಪ್ರವಾಸಿಗನೊಬ್ಬ ಬೋನ್‍ನಲ್ಲಿದ್ದ ಸಿಂಹದ ಜೊತೆ ಆಟವಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಸಿಂಹದ ದವಡೆಗೆ ಕೈ ಸಿಲುಕಿಸಿಕೊಂಡು ಅದರಿಂದ ಬಿಡಿಸಿಕೊಂಡು ಹೊರ ಬರಲು ಹೆಣಗಾಡಿದ್ದಾನೆ. ಕೊನೆಗೆ ಸಿಂಹದ ಬಾಯಿಯಿಂದ ಕೈಯನ್ನು ಬಿಡಿಸಿಕೊಳ್ಳುವ ವೇಳೆ ಬೆರಳು ಕಟ್ ಆಗಿದ್ದು, ರಭಸದಿಂದ ಹಿಂದಕ್ಕೆ ಬಂದು ಕೆಳಗೆ ಬಿದ್ದಿದ್ದಾನೆ. ಇದೀಗ ಭಯಾನಕ ದೃಶ್ಯದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:  ನಿಧಿಗಳ್ಳರಿಂದ ಐತಿಹಾಸಿಕ ಬೀರೇಶ್ವರ ದೇವರ ವಿಗ್ರಹ ಕಳ್ಳತನ

ಈ ವೀಡಿಯೋವನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಶೋ ಆಫ್ ಮಾಡಲು ಹೋದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಸ್ತೆ ಮಧ್ಯೆ ಹುಲಿ ಪ್ರತ್ಯಕ್ಷ – ಬೆಚ್ಚಿಬಿದ್ದ ವಾಹನ ಸವಾರರು 

Comments

Leave a Reply

Your email address will not be published. Required fields are marked *