ಆಧಾರ್ ಅಪ್‌ಡೇಟ್‌ಗಾಗಿ ಬ್ಯಾಂಕ್ ಹೆಸರಲ್ಲಿ ಲಿಂಕ್ – 18 ಲಕ್ಷ ರೂ. ವಂಚನೆ

ತುಮಕೂರು: ಆಧಾರ್ ಅಪ್‌ಡೇಟ್ (Aadhar Update) ಎಂದು ಬ್ಯಾಂಕ್ ಹೆಸರಿನಲ್ಲಿ ಲಿಂಕ್ ಕಳುಹಿಸಿ, ನಿವೃತ್ತ ನೌಕರರೊಬ್ಬರಿಗೆ 18.50 ಲಕ್ಷ ರೂ. ವಂಚಿಸಿರುವ ಘಟನೆ ತುಮಕೂರು (Tumakuru) ಜಿಲ್ಲೆಯ ಹೊರವಲಯದ ಸಿದ್ದಾರ್ಥ ನಗರದಲ್ಲಿ ನಡೆದಿದೆ.

ನಿವೃತ್ತ ನೌಕರ ಕಾಂತರಾಜು ಸೈಬರ್ ಕಳ್ಳರ ಬಲೆಗೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ.ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಗುಡಿಸಲು, 100 ಕ್ವಿಂಟಾಲ್ ಹತ್ತಿ ಭಸ್ಮ – ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ

ನ.5ರಂದು ಆರೋಪಿಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಹೆಸರಿನ ವಾಟ್ಸಪ್ ಗ್ರೂಪ್‌ಗೆ ಸೇರಿಸಿದ್ದಾರೆ. ಈ ಗ್ರೂಪ್‌ನಲ್ಲಿ ಯೂನಿಯನ್ ಬ್ಯಾಂಕ್ ಆಧಾರ್ ಅಪ್‌ಡೇಟ್ ಎಪಿಕೆ ಎಂದು ಫೈಲ್ ಕಳುಹಿಸಿದ್ದಾರೆ. ಆ ಫೈಲ್‌ನ್ನು ಕಾಂತರಾಜು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಪರಿಚಿತರೊಬ್ಬರು ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅಪ್‌ಡೇಟ್ ಆಗಿದೆ. ಚೆಕ್ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಇದಾದ ನಂತರ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 18,50,010 ಹಣ ವರ್ಗಾವಣೆಯಾಗಿದೆ. ಸದ್ಯ ಸೈಬರ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ವಿವಾದಕ್ಕೆ ಕಾರಣವಾದ ರಾಗಾ `ರೆಡ್‌ ಬುಕ್’ – ಸಂವಿಧಾನ ಪ್ರತಿ ಎಂದ ಪುಸ್ತಕದಲ್ಲಿ ಖಾಲಿ ಹಾಳೆ: ಫಡ್ನವಿಸ್‌ ಕೌಂಟರ್‌