ತಂದೆ ದಾರಿಯನ್ನೇ ತುಳಿದ ಪುತ್ರ ಅರ್ಜುನ್ ತೆಂಡೂಲ್ಕರ್

ನವದೆಹಲಿ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಅಂಡರ್ 19 ಯೂತ್ ಟೆಸ್ಟ್ ಪಂದ್ಯದ ಬ್ಯಾಂಟಿಂಗ್ ಅರ್ಜುನ್ ಕೂಡ ರನ್ ಖಾತೆ ತೆಗೆಯಲು ವಿಫಲರಾಗಿದ್ದು, ತಂದೆ ಸಚಿನ್ ತೆಂಡೂಲ್ಕರ್ ರಂತೆ ತಮ್ಮ ವೃತ್ತಿ ಜೀವನದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.

ಕೊಲಂಬೊದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಬೌಲರ್ ಶಶಿಕಾ ದುಲ್ಶನ್ ಬೌಲಿಂಗ್ ನಲ್ಲಿ ಅರ್ಜುನ್ ಶೂನ್ಯಕ್ಕೆ ಔಟಾದರು. ಇದಕ್ಕೂ ಮುನ್ನ ಅರ್ಜುನ್ 11 ಎಸೆತಗಳನ್ನು ಎದುರಿಸಿದರೂ ಸಹ ರನ್ ಖಾತೆ ತೆಗೆಯಲು ವಿಫಲರಾಗಿ ನಿರಾಸೆ ಮೂಡಿಸಿದರು.

ಈ ಪಂದ್ಯದಲ್ಲೇ ಅರ್ಜುನ್ ತಮ್ಮ ಮೊದಲ ವಿಕೆಟ್ ಪಡೆದ ಸಾಧನೆಯನ್ನು ಮಾಡಿರುವ ಅರ್ಜುನ್, ತಮ್ಮ ಬೌಲಿಂಗ್ ನ 12 ಎಸೆತಗಳಲ್ಲಿ ಶ್ರೀಲಂಕಾ ಆಟಗಾರ ಕಮಿಲ್ ಮಿಶ್ರಾರನ್ನು ಎಲ್‍ಬಿ ಬಲೆಗೆ ಕೆಡವಿ ಮೊದಲ ವಿಕೆಟ್ ಪಡೆದು ಮಿಂಚಿದ್ದರು. ಇದಕ್ಕೂ ಮುನ್ನ ತಮ್ಮ ಮೊದಲ ಎಸೆತದ ರನ್ ಆಫ್ ಮಾಡುವ ವೇಳೆ ಅರ್ಜುನ್ ಎಡವಿದ್ದರು. ಅಂದಹಾಗೇ ಅರ್ಜುನ್ ಎಡಗೈ ವೇಗಿಯಾಗಿದ್ದು, ಇನ್ ಸ್ವೀಂಗ್ ಮಾಡುವ ಕೌಶಲ್ಯ ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 11 ಓವರ್ ಬೌಲ್ ಮಾಡಿರುವ ಅರ್ಜುನ್ 33 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 2 ಮೆಡಿನ್ ಓವರ್ ಗಳು ಸಹ ಸೇರಿದೆ.

1989 ರ ವೇಳೆ 16 ವರ್ಷದ ಸಚಿನ್ ಕೂಡ ತಮ್ಮ ಏಕದಿನ ಪಂದ್ಯದ ಪಾದಾರ್ಪಣೆ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದರು. ಪಾಕ್ ಬೌಲರ್ ವಕಾರ್ ಯೂನಿಸ್ ಬೌಲಿಂಗ್ ನಲ್ಲಿ ಸಚಿನ್ ವಿಕೆಟ್ ಒಪ್ಪಿಸಿದ್ದರು.

ಟೀಂ ಇಂಡಿಯಾ ಅಂಡರ್ 19 ತಂಡದಲ್ಲಿ 18 ವರ್ಷದ ಅರ್ಜನ್ ಮೊದಲ ಬಾರಿಗೆ ಸ್ಥಾನ ಪಡೆದಿದ್ದರು. ಬಳಿಕ ಶ್ರೀಲಂಕಾ ಸರಣಿ ತರಬೇತಿ ಶಿಬಿರಕ್ಕೆ ಹಾಜರಾಗಿದ್ದರು. ಟೀಂ ಇಂಡಿಯಾ ಸದ್ಯ ಶ್ರೀಲಂಕಾ ವಿರುದ್ಧ ಯೂತ್ ಟೆಸ್ಟ್ ಟೂರ್ನಿಯಲ್ಲಿ 2 ಪಂದ್ಯಗಳನ್ನು ಆಡಲಿದೆ. ಬಳಿಕ 2 ಪಂದ್ಯಗಳ ಏಕದಿನ ಟೂರ್ನಿಯಲ್ಲಿ ಭಾಗವಹಿಸಲಿದೆ.

https://twitter.com/KSKishore537/status/1019143288685776896?

Comments

Leave a Reply

Your email address will not be published. Required fields are marked *