1 ಗಂಟೆ ಪುಸ್ತಕ ಓದಿದರೆ ಒಂದು ಉಡುಗೊರೆ – ಶಿಕ್ಷಣ ಪ್ರೇಮಿಯ ವಿನೂತನ ಪ್ರಯತ್ನ

– ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಪ್ರಯತ್ನ

ರಾಯಚೂರು: ಸರ್ಕಾರ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ಪ್ರತೀವರ್ಷ ನಾನಾ ಕಸರತ್ತುಗಳನ್ನು ಮಾಡುತ್ತಲೇ ಇರುತ್ತೆ. ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತೆ. ಆದ್ರೆ ಸರ್ಕಾರಿ ಶಾಲೆಗಳಲ್ಲಿ ಎಷ್ಟರ ಮಟ್ಟಿಗೆ ಮಕ್ಕಳ ಸಂಖ್ಯೆ ಹೆಚ್ಚಾಗಿದೆಯೋ ಗೊತ್ತಿಲ್ಲ. ಆದ್ರೆ ರಾಯಚೂರಿನ ಶಿಕ್ಷಣ ಪ್ರೇಮಿ ಖಾಸಗಿ ಕಂಪನಿ ಉದ್ಯೋಗಿ ರಂಗಾರಾವ್ ದೇಸಾಯಿ ಕಾಡ್ಲೂರು ಮಾಡಿರುವ ಹೊಸ ಐಡಿಯಾ ‘ಕಲಿಕೆ ಜೊತೆ ಗಳಿಕೆ’ ಮಾತ್ರ ಕೆಲಸ ಮಾಡುತ್ತಿದೆ.

ನಗರದ ಗಾಜಗಾರಪೇಟೆಯ ರಂಗಾರಾವ್ ದೇಸಾಯಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡು ಗ್ರಾಮದಲ್ಲಿ ಶಿಕ್ಷಣ ಪ್ರೇಮ ಮೆರೆಯುತ್ತಿದ್ದಾರೆ. ಬಡ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಬೇಕು ಬೇಸಿಗೆ ರಜೆಯನ್ನು ಮಕ್ಕಳು ಅರ್ಥಪೂರ್ಣವಾಗಿ ಕಳೆಯಬೇಕು ಎಂದು ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇದನ್ನೂ ಓದಿ: ಸರ್ಕಾರ ಮರೆತರು, ಜನಪ್ರತಿನಿಧಿಗಳು ಕೊಟ್ಟ ಹಣದಲ್ಲಿ ಗ್ರಂಥಾಲಯ ನಿರ್ಮಿಸಿದ ಅನಕ್ಷರಸ್ಥ!

ಮಕ್ಕಳಿಗೆ ಕಲಿಕೆ ಜೊತೆ ಗಳಿಕೆ ಅನ್ನೋ ಯೋಚನೆಯೊಂದಿಗೆ ಈ ಪುಟ್ಟ ಗ್ರಂಥಾಲಯದಲ್ಲಿ 800ಕ್ಕೂ ಹೆಚ್ಚು ಮಹನೀಯರ, ಸಾಧಕರ ಬಗ್ಗೆ ಮಾಹಿತಿಯಿರುವ ಕಿರು ಹೊತ್ತಿಗೆಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಈ ಪುಸ್ತಕಗಳನ್ನ ಓದಲು ಬರುವ ಮಕ್ಕಳಿಗೆ ಮನೆಗೆ ವಾಪಸ್ ಹೋಗುವಾಗ ಒಂದು ಉಡುಗೊರೆಯನ್ನು ನೀಡುತ್ತಾರೆ. ಉಡುಗೊರೆ ಆಯ್ಕೆ ಮಕ್ಕಳಿಗೆ ಬಿಟ್ಟಿದ್ದಾರೆ, ಪೆನ್, ಪರೀಕ್ಷೆ ಪ್ಯಾಡ್, ಪೇಂಟಿಂಗ್ ಕಿಟ್, ಗಾಳಿಪಟ, ಆಟಿಕೆಗಳು, ಟೋಪಿ, ಸ್ಕೇಲ್, ನೀರಿನ ಬಾಟಲ್ ಹೀಗೆ ಬಗೆಬಗೆಯ ಉಡುಗೊರೆಗಳು. ಒಂದು ಗಂಟೆ ಈ ಗ್ರಂಥಾಲಯದಲ್ಲಿ ಕುಳಿತು ಓದಿದರೆ ಒಂದು ಉಡುಗೊರೆ ಖಾಯಂ. ಉಡುಗೊರೆ ಆಸೆಗೆ ಅಂತಾದರೂ ಬರುವ ಮಕ್ಕಳು ಪುಸ್ತಕಗಳನ್ನು ಓದುತ್ತಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್‌ ಆಡಿಯೋ

ರಜೆಯಲ್ಲಿ ಮೊಬೈಲ್ ಜೊತೆಯಲ್ಲೇ ಮಕ್ಕಳು ಹೆಚ್ಚಿನ ಸಮಯ ಕಳೆಯುತ್ತಾರೆ. ಅಲ್ಲದೆ ಪಠ್ಯದ ಹೊರೆಗೆ ಮಕ್ಕಳು ಸುಸ್ತಾಗುತ್ತಾರೆ. ಹೀಗಾಗಿ ಯಾವುದೇ ಪರೀಕ್ಷೆ ಗೋಜು ಇಲ್ಲದೆ ವಿವಿಧ ಕ್ಷೇತ್ರಗಳ ಸಾಧಕರ ಜೀವನ ಚರಿತ್ರೆ ಓದಿ ಮಕ್ಕಳು ಸ್ಪೂರ್ತಿ ಪಡೆಯುತ್ತಿದ್ದಾರೆ. ಹಣ ವಿದ್ದವರು ಮಕ್ಕಳನ್ನು ಸಮ್ಮರ್ ಕ್ಲಾಸ್‍ಗೆ ಕಳುಹಿಸುತ್ತಾರೆ. ಆದ್ರೆ ಬಡ ಮಕ್ಕಳು ಸಮಯ ವ್ಯರ್ಥಮಾಡಬಾರದು, ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ರಂಗಾರಾವ್ ದೇಸಾಯಿ ತಮ್ಮ ಮನೆಯ ಒಂದು ಕೋಣೆಯನ್ನು ಗ್ರಂಥಾಲಯವಾಗಿ ಮಾರ್ಪಾಡು ಮಾಡಿದ್ದಾರೆ. ನಾನಾ ಉಡುಗೊರೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲೆ ಮಕ್ಕಳಿಗೆ ನೀಡುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ – ಮೂವರು ಕಾರ್ಮಿಕರ ಸಾವು

ಈ ಹಿಂದೆಯೂ ಹಲವಾರು ಶೈಕ್ಷಣಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರಂಗಾರಾವ್ ದೇಸಾಯಿ ಕೊರೊನಾ ಸಮಯದಲ್ಲಿ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ಉಚಿತವಾಗಿ ನೀಡಿದ್ದರು. ಈಗ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *