ನನ್ನ ವಿರುದ್ಧ ಸಿಎಂ ಬೇಕಾದ್ರೂ ಸ್ಪರ್ಧಿಸಲಿ, ಅಭ್ಯಂತರವಿಲ್ಲ- ಬಿಎಸ್‍ವೈ

ಕಲಬುರಗಿ: ಹೈಕಮಾಂಡ್ ಸೂಚನೆ ಮೇರೆಗೆ ಕ್ಷೇತ್ರ ಅಯ್ಕೆಯಲ್ಲಿ ಚಿಂತನೆ ನಡೆಸಲಾಗುವುದು. ಸಿಎಂ ಸಿದ್ದರಾಮಯ್ಯ ಬೇಕಾದ್ರೆ ನನ್ನ ವಿರುದ್ಧ ಸ್ಪರ್ಧಿಸಲಿ. ಅದಕ್ಕೆ ನನ್ನ ಅಭ್ಯಂತರವಿಲ್ಲ ಅಂತ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ವಿಜಯಪುರ-ಬಾಗಲಕೋಟ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮಗಳೊಂದಿಗೆ ಬಿಎಸ್‍ವೈ ಮಾತನಾಡಿದ್ರು. ಈ ಮಧ್ಯೆ ಹೈಕ ಭಾಗದಿಂದ ಸ್ಪರ್ಧಿಸುವಂತೆ ವಿಧಾನ ಪರಿಷತ್ ಸದಸ್ಯ ಕೆ.ಬಿ.ಶಾಣಪ್ಪ ಆಗ್ರಹಿಸಿದ್ದಾರೆ. ಅಲ್ಲದೇ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸಲು ಸ್ಥಳೀಯ ಮುಖಂಡರು ಆಗ್ರಹಿಸುತ್ತಿದ್ದಾರೆ ಅಂದ್ರು.

ಚುನಾವಣೆಗೆ ತಯಾರಿಗಳು ಎಲ್ಲಾ ಪಕ್ಷದಲ್ಲಿ ಆರಂಭವಾಗಿದೆ. ಇನ್ನು ಕೇವಲ 4 ರಿಂದ 5 ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಾಗಬೇಕು. ಹಲವು ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಸಹ ಜಿಲ್ಲಾ ಮಟ್ಟದ ಸಮಾವೇಶ ಮಾಡಲಾಗುವುದು. ನವೆಂಬರ್ 1 ರಾಜ್ಯೋತ್ಸವ ದಿನದಂದು ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಂದಿನಿಂದ ರಾಜ್ಯದಲ್ಲಿ ಪರಿವರ್ತನಾ ಯಾತ್ರೆ ಆರಂಭವಾಗುತ್ತದೆ ಅಂತ ಹೇಳಿದ್ರು.

ನಾಲ್ಕರಿಂದ ಐದು ಸಚಿವ ಮತ್ತು ಶಾಸಕರ ಹಗರಣದ ದಾಖಲೆ ಶೀಘ್ರ ಬಿಡುಗಡೆ ಮಾಡಲಾಗುವುದು. ಇದರಲ್ಲಿ ಸಿಎಂ ಕುಟುಂಬದ ಸಂಬಂಧಿಕರ ಹಗರಣ ಬಿಡುಗಡೆ ಮಾಡಲಾಗುವುದು. ಸಿದ್ದರಾಮಯ್ಯ ಘೋಷಣೆ ರಾಜಕೀಯಪ್ರೇರಿತ. ಜನವರಿ ನಂತರ ಯಾವ ಕಾರ್ಯಕ್ರಮ ಜಾರಿಯಗಲ್ಲ. ಹೊಸ ಘೋಷಣೆ ಮೂಲಕ ಜನರನ್ನು ಸಿಎಂ ಮರಳು ಮಾಡುತ್ತಿದ್ದಾರೆ ಅಂದ್ರು.

Comments

Leave a Reply

Your email address will not be published. Required fields are marked *