ಚಿತ್ರದುರ್ಗ | ರೈತರ ನಿದ್ದೆಗೆಡಿಸಿದ್ದ ಚಿರತೆ ಸೆರೆ

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು (Molakalmuru) ತಾಲೂಕಿನ ಅಮಕುಂದಿ ಗ್ರಾಮದ ಬಳಿ ರೈತರ ನಿದ್ದೆಗೆಡಿಸಿದ್ದ ಚಿರತೆಯನ್ನು (Leopard) ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

ರೈತ ನಾಗೇಶ್‌ಗೆ ಸೇರಿದ ತೋಟದಲ್ಲಿ ಚಿರತೆ ಬೀಡುಬಿಟ್ಟಿತ್ತು. ಚಿರತೆ ಕಂಡು ಭಯಭಿತರಾದ ರೈತರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸದ್ಯ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಬಲೆಯ ಮೂಲಕ ಚಿರತೆ ಸೆರೆ ಹಿಡಿದು ಬೋನಿಗೆ ಹಾಕಿದ್ದಾರೆ. ಇದನ್ನೂ ಓದಿ: ಉದ್ಯೋಗ ಅರಸಿ ವಿದೇಶಕ್ಕೆ ತೆರಳಿ ವಂಚನೆಗೊಳಗಾಗಿದ್ದ 28 ಕನ್ನಡಿಗರ ರಕ್ಷಣೆ

ಮೊಳಕಾಲ್ಮೂರು ಆರ್‌ಎಫ್‌ಓ ಹರ್ಷ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಎರಡು ವರ್ಷದ ಹೆಣ್ಣು ಚಿರತೆಯನ್ನು ಸೆರೆಹಿಡಿಯಲಾಗಿದೆ. ಇದನ್ನೂ ಓದಿ: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ | ಮಿನಿಸ್ಟರ್ ಕೈವಾಡವಿದೆ ಅನ್ನೋದು ಊಹಾಪೋಹ ಎಂದ ಜಮೀರ್