ನಟ ಧನಂಜಯ್ ಗೆ ‘ಅಗ್ನಿ’ ಪರೀಕ್ಷೆ: ಕಾನೂನು ಹೋರಾಟ ಮಾಡ್ತೀನಿ ಅಂತಾರೆ ಜಯರಾಜ್ ಪುತ್ರ

ಕೋಟಿ ಕೋಟಿ ಬಂಡವಾಳ ಸುರಿದು ‘ಹೆಡ್ ಬುಷ್’ ಸಿನಿಮಾ ಮಾಡಿದ್ದಾರೆ ಡಾಲಿ ಧನಂಜಯ್. ಅವರೇ ಮುಖ್ಯ ಪಾತ್ರದಲ್ಲಿ ನಟಿಸಿ, ಹೆಸರಾಂತ ತಾರಾ ಬಳಗವನ್ನೇ ಹಾಕಿಕೊಂಡು ಹೊಸ ರೀತಿಯ ಚಿತ್ರ ಮಾಡಲಾಗಿದೆ. ಆದರೆ, ಏಕಾಏಕಿ ಸಿನಿಮಾದ ಕುರಿತು ಅಪಸ್ವರ ಎದ್ದಿದ್ದು, ಸಿನಿಮಾದ ಶೂಟಿಂಗ್ ಮುಗಿದ ಹೊತ್ತಿನಲ್ಲಿ ಈ ವಿವಾದ ಶುರುವಾಗಿದ್ದರಿಂದ ಧನಂಜಯ್ ಅವರಿಗೆ ಇದೊಂದು ರೀತಿಯಲ್ಲಿ ಅಗ್ನಿ ಪರೀಕ್ಷೆಯೇ ಆಗಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

ಸಿನಿಮಾ ತಂಡವೇ ಘೋಷಿಸಿಕೊಂಡಂತೆ ಅಗ್ನಿ ಶ್ರೀಧರ್ ಅವರ ಪುಸ್ತಕವನ್ನು ಆಧರಿಸಿದ ಚಿತ್ರವಿದು. ಈ ಸಿನಿಮಾದಲ್ಲಿ ಧನಂಜಯ್ ಬೆಂಗಳೂರು ಭೂಗತ ಜಗತ್ತಿನ ಡಾನ್ ಎಂದೇ ಖ್ಯಾತರಾಗಿದ್ದ ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಷಯವನ್ನು ಸಿನಿಮಾ ತಂಡವೇ ಈ ಹಿಂದೆ ಹೇಳಿಕೊಂಡಿದೆ. ಹಾಗಾಗಿ ಜಯರಾಜ್ ಪುತ್ರ ಅಜಿತ್ ಈ ಸಿನಿಮಾದ ಬಗ್ಗೆ ಅಪಸ್ವರ ತಗೆದಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

ನನ್ನ ತಂದೆಯ ಕುರಿತು ಸಿನಿಮಾ ಮಾಡುತ್ತಿದ್ದಾರೆ ಎಂದು ಗೊತ್ತಾದಾಗ ಸಿನಿಮಾ ತಂಡವನ್ನು ಸಂಪರ್ಕಿಸಿದೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ನನ್ನ ತಂದೆಯ ಕುರಿತಾಗಿ ಯಾರೂ ಸಿನಿಮಾ ಮಾಡಬಾರದು. ಮಾಡಿರುವ ಸಿನಿಮಾವನ್ನು ರಿಲೀಸ್ ಮಾಡಕೂಡದು ಎಂದು ಅಜಿತ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವೊಂದನ್ನು ನೀಡಿದ್ದಾರೆ. ಅಲ್ಲದೇ, ಈ ಕುರಿತಾಗಿ ಕಾನೂನು ಹೋರಾಟವನ್ನೂ ಮಾಡುವುದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ : ಹಾಲಿವುಡ್‌ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್

ಅಸಲಿ ವಿಷಯ ಹೇಳುವುದಾದರೆ, ಧನಂಜಯ್ ಮತ್ತು ಅಜಿತ್ ಇಬ್ಬರೂ ಆತ್ಮೀಯರು. ಒಟ್ಟೊಟ್ಟಿಗೆ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧನಂಜಯ್ ಅವರು ಸ್ವತಃ ಅಜಿತ್ ಮದುವೆಗೂ ಹೋಗಿದ್ದರು. ಹೆಡ್ ಬುಷ್ ಸಿನಿಮಾ ಆಗುವ ಸಂದರ್ಭದಲ್ಲಿ ಅಜಿತ್ ಚಿತ್ರಕ್ಕೆ ಶುಭ ಹಾರೈಸಿದ್ದರು. ಇದೀಗ ಏಕಾಏಕಿ ಉಲ್ಟಾ ಹೊಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಧನಂಜಯ್, ‘ಕೋಟಿ ಕೋಟಿ ಸುರಿದು ಸಿನಿಮಾ ಮಾಡಿದ್ದೇವೆ. ರಿಲೀಸ್ ಹೊತ್ತಿನಲ್ಲಿ ತೊಂದರೆ ಮಾಡುವುದು ಸರಿಯಲ್ಲ. ಅವರ ತಂದೆಯವರನ್ನು ನಾನು ಕೆಟ್ಟದಾಗಿ ಬಿಂಬಿಸಿಲ್ಲ. ಸಿನಿಮಾ ನೋಡಿದ ನಂತರ ಅವರು ಮಾತನಾಡಿದರೆ ಅದಕ್ಕೊಂದು ಅರ್ಥವಿರುತ್ತದೆ. ಅಗ್ನಿ ಶ್ರೀಧರ್ ಅವರು ಬರೆದ ಪುಸ್ತಕದ ಹಕ್ಕನ್ನು ಪಡೆದು ಸಿನಿಮಾ ಮಾಡಲಾಗಿದೆ’ ಎನ್ನುತ್ತಾರೆ. ಹೆಡ್ ಬುಷ್ ಸಿನಿಮಾ ಮಾಡುವಾಗಲೇ ಕಥೆ, ಪಾತ್ರದ ಬಗ್ಗೆ ಸಿನಿಮಾ ತಂಡ ಹೇಳಿಕೊಂಡಿದೆ. ಪಾತ್ರಗಳ ಪರಿಚಯದ ಪೋಸ್ಟರ್ ರಿಲೀಸ್ ಮಾಡುವಾಗಲೇ ಪಾತ್ರದ ಬಗ್ಗೆ ಪರಿಚಯಿಸಿದೆ. ಇದೀಗ ಸಿನಿಮಾ ಮುಗಿದ ಮೇಲೆ ಏಕಾಏಕಿ ಸಿನಿಮಾ ನಿಲ್ಲಿಸಬೇಕು ಎನ್ನುವುದು ಎಷ್ಟು ಸರಿ ಎನ್ನುತ್ತಿದೆ ಹೆಡ್ ಬುಷ್ ತಂಡ.

Comments

Leave a Reply

Your email address will not be published. Required fields are marked *